ಅಪರೂಪದ ಮತ್ತು ನಾಟಕೀಯ ವಿದ್ಯಮಾನದಲ್ಲಿ ಮಳೆಯೆಂದರೆ ಅಪರೂಪವಾಗಿರುವ ಸಹಾರಾ ಮರುಭೂಮಿಯ ಭಾಗಗಳು ಎರಡು ದಿನಗಳ ಧಾರಾಕಾರ ಮಳೆ ಹಾಗೂ ಭಾರಿ ಪ್ರವಾಹಕ್ಕೆ ಸಾಕ್ಷಿಯಾಯಿತು.

ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿಯಾದ ಸಹಾರಾ ಉತ್ತರ ಆಫ್ರಿಕಾದಲ್ಲಿದೆ, ಇದು ಪ್ರಪಂಚದ ಅತ್ಯಂತ ಶುಷ್ಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಬೇಸಿಗೆಯ ಕೊನೆಯಲ್ಲಿ ಮಳೆ ಅಪರೂಪವಾಗಿ ಬರುತ್ತದೆ. ಆದರೆ ಈ ವರ್ಷದ ಮಳೆಯು ಮೊರೊಕನ್ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಎರಡು ದಿನಗಳ ಮಳೆಯು ಅದರ ವಾರ್ಷಿಕ ಸರಾಸರಿ ಮಳೆ ಪ್ರಮಾಣವನ್ನುಮೀರಿದೆ ಎಂದು ಮೊರಾಕೊ ಅಧಿಕಾರಿಗಳು ಹೇಳಿದ್ದಾರೆ.

ರಾಜಧಾನಿ ರಬತ್‌ನ ದಕ್ಷಿಣಕ್ಕೆ 450 ಕಿಮೀ ದೂರದಲ್ಲಿರುವ ಟಗೌನೈಟ್ ಗ್ರಾಮವು ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿಮೀ ಮಳೆಯನ್ನು ದಾಖಲಿಸಿದೆ ಎಂದು ಮೊರಾಕೊದ ಹವಾಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಸಾ ಸೆರೆಹಿಡಿದ ಉಪಗ್ರಹ ಚಿತ್ರಗಳು 50 ವರ್ಷಗಳ ನಂತರ ಝಗೋರಾ ಮತ್ತು ಟಾಟಾ ನಡುವಿನ ಒಣ ಸರೋವರದ ಇರಿಕಿ ಸರೋವರವು ಪ್ರವಾಹದಿಂದ ತುಂಬಿದೆ ಎಂದು ಸೂಚಿಸಿದೆ. ” ಕಳೆದ 30 ರಿಂದ 50 ವರ್ಷಗಳಲ್ಲಿ ನಾವು ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಮಳೆ ಕಂಡಿರಲಿಲ್ಲ ಎಂದು ಮೊರಾಕೊದ ಹವಾಮಾನ ಸಂಸ್ಥೆಯ ಅಧಿಕಾರಿ ಹೂಸಿನ್ ಯೂಬೇಬ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಮೊರಾಕೊದಲ್ಲಿನ ಪ್ರವಾಹವು ಕಳೆದ ತಿಂಗಳು 18 ಜನರ ಸಾವಿಗೆ ಕಾರಣವಾಯಿತು ಮತ್ತು ಹಿಂದಿನ ವರ್ಷ ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ಪ್ರದೇಶಗಳಿಗೆ ಮಳೆ ವಿಸ್ತರಿಸಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಮೊರೊಕಾದ ಆಗ್ನೇಯದಲ್ಲಿ ಜಲಾಶಯಗಳು ಸೆಪ್ಟೆಂಬರ್‌ನಲ್ಲಿ ಅಭೂತಪೂರ್ವ ದರದಲ್ಲಿ ಮರುಪೂರಣಗೊಂಡಿವೆ ಎಂದು ವರದಿಯಾಗಿದೆ.

ಉತ್ತರ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಾದ್ಯಂತ 9 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸಹಾರಾ ಮರುಭೂಮಿಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಹವಾಮಾನ ವೈಪರೀತ್ಯಗಳ ಬೆದರಿಕೆಗಳನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಈ ಪ್ರಮಾಣದ ಬಿರುಗಾಳಿಗಳು ಈ ಪ್ರದೇಶದಲ್ಲಿ ಹೆಚ್ಚಾಗಿ ಆಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ, “ಹೆಚ್ಚುತ್ತಿರುವ ತಾಪಮಾನದ ಪರಿಣಾಮವಾಗಿ, ಜಲವಿಜ್ಞಾನದ ಚಕ್ರವು ವೇಗಗೊಂಡಿದೆ. ಇದು ಹೆಚ್ಚು ಅನಿಯಮಿತವಾಗಿದೆ ಮತ್ತು ಅನಿರೀಕ್ಷಿತವಾಗಿದೆ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹೊಂದಿರುತ್ತದೆ, ಇದು ಹೆಚ್ಚು ಕ್ಷಿಪ್ರವಾಗಿ ಆವಿಯಾಗುವಿಕೆಗೆ ಅನುಕೂಲಕರವಾಗಿದೆ ಮತ್ತು ಬರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದಾರೆ.