Join The Telegram | Join The WhatsApp |
ಅಥಣಿ-
ಅಥಣಿ ಗುಡ್ಡದ ಲಕ್ಷ್ಮೀ ನಗರದಲ್ಲಿರುವ ಸಾಯಿಬಾಬಾರವರ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವವು ಕಾರ್ಯಕ್ರಮವು ಸೋಮವಾರ ದಿ, 13 ರಂದು ಜರುಗಲಿದೆ.
ಸೋಮವಾರದಂದು ಬೆಳಗ್ಗೆ ಬಾಹ್ಮೀ ಮುಹೂರ್ತದಲ್ಲಿ ಸಾಯಿಬಾಬಾರವರ ಮೂರ್ತಿಗೆ ಮಹಾರುದ್ರಾಭಿಷೇಕ, ಕುಂಭಾಭಿಷೇಕ ಕ್ಷೀರಾಭಿಷೇಕ,ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ 1008 ಬಿಲ್ವರ್ಚಣೆ ಮತ್ತು ರುದ್ರಹೋಮ ಪೂರ್ಣಾಹುತಿ ಪೂಜೆ ಮಹಾಮಂಗಳಾರತಿ ನೇರವೇರುವುದು.
ಈ ಎಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಅಥಣಿ ಹಾಗೂ ಸುತ್ತಮುತ್ತಲಿನ ಸಮಸ್ತ ಸದ್ಬಕ್ತರು ಪಾಲ್ಗೊಂಡು ತಮ್ಮ ತನು ಮನ ಧನದಿಂದ ಸೇವೆ ಸಲ್ಲಿಸಿ ಸಾಯಿಬಾಬಾರವರ ಕೃಪಾಶೀರ್ವಾದ ಪಡೆದು ಪುನಿತರಾಗಬೇಕು ಎಂದು ಸಾಯಿ ಮಂದಿರದ ಧರ್ಮಾಧಿಕಾರಿಗಳಾದ ವೇ,ಮು. ಶಂಕರ ಸ್ವಾಮಿಗಳು ಪ್ರಕಟಣೆಯನ್ನು ತಿಳಿಸಿದ್ದಾರೆ.
Join The Telegram | Join The WhatsApp |