ಬೆಳಗಾವಿ: ಮೀನು ಹಿಡಿಯಲು ಹೋದ ಮೀನುಗಾರನೊಬ್ಬ ಮೀನಿನ ಬಲಿ ಕಾಲಿಗೆ ಸಿಲುಕಿ ಕೃಷ್ಣ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (35) ಮೃತ ವ್ಯಕ್ತಿ. ಈತ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ. ಮಹಾಂತೇಶ ಎಂದಿನಂತೆ ಇಂದು ಬೆಳಿಗ್ಗೆ ಸತ್ತಿ ಗ್ರಾಮದ ಹೊರವಲಯದ ಕೃಷ್ಣ ನದಿಯಲ್ಲಿ ಮೀನು ಹಿಡಿಯಲು ಹೋಗಿ ಮೀನಿಗೆ ಬಲಿ ಹಾಕುವ ವೇಳೆ ಕಾಲಿಗೆ ಬಲಿ ಸಿಲುಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಸ್ಥಳೀಯರ ಸಹಾಯದಿಂದ ಮೃತ ದೇಹ ಹೊರತೆಗೆಯಲಾಗಿದ್ದು ಸ್ಥಳಕ್ಕೆ ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.