ಕೆರ್ಜಾಡಿ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಶಿವರಾಯ ಗರೋಡಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಕೆರ್ಜಾಡಿ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಶಿವರಾಯ ಗರೋಡಿಯಲ್ಲಿ ದಿನಾಂಕ : 22-08-2024 ಗುರುವಾರದಂದು ಬೆಳಿಗ್ಗೆ ಗಂಟೆ 10.00 ರಿಂದ ತಂತ್ರಿಗಳಾದ ವೇದಮೂರ್ತಿ ಶ್ರೀ ಸದಾಶಿವ ಭಟ್ ಬೇಳಂಜೆ ಮತ್ತು ವೇದಮೂರ್ತಿ ಶ್ರೀನಿವಾಸ ಬಾಯರಿ ಬೆಪ್ಡೆ ಇವರ ನೇತೃತ್ವದಲ್ಲಿ ಸ್ವರ್ಣಾರೂಢ ಪ್ರಶ್ನೆಯಲ್ಲಿ ಬಂದ ಪ್ರಾಯಶ್ಚಿತ್ತದ ಅಂಗವಾಗಿ 12 ತೆಂಗಿನಕಾಯಿ ಗಣಯಾಗ, ಶ್ರೀ ಬ್ರಹ್ಮ ಬೈದರ್ಕಳ ಪರಿವಾರ ದೈವಗಳಿಗೆ ಪಂಚಕಜ್ಜಾಯ ಸೇವೆ, ತುಳಸಿಕಟ್ಟೆಯಲ್ಲಿ ವಸಂತ ಪೂಜೆ ಹಾಗೂ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರು ಮುಷ್ಟಿ ಕಾಣಿಕೆ ಕಾರ್ಯಕ್ರಮ ನಡೆಸಲು ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿದೆ. ಗರೋಡಿಯ ಜೀರ್ಣೋದ್ದಾರದ ಬಗ್ಗೆ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮದಲ್ಲಿ ಮತ್ತು ಮುಷ್ಟಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಗ್ರಾಮದ ಪ್ರತಿ ಮನೆಯ ಸದಸ್ಯರು ದಯವಿಟ್ಟು ಭಾಗವಹಿಸಿ ಮುಷ್ಟಿ ಕಾಣಿಕೆಯನ್ನು ಸಮರ್ಪಣೆ ಮಾಡಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಶಿವರಾಯ ದೈವಗಳ ಅನುಗ್ರಹ ಪಡೆಯುವಂತೆ ಕೋರಲಾಗಿದೆ.