
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ (ಆದ್ಯತಾ ಕುಟುಂಬ), ಎಪಿಎಲ್ (ಆದ್ಯತೆಯೇತರ ಕುಟುಂಬ) ಪಡಿತರ ಚೀಟಿಗಳನ್ನು ವಿತರಿಸಲು ಆಹಾರ ಇಲಾಖೆ ಮುಂದಾಗಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಅನುಮತಿ ನೀಡುವ ಸಂಬಂಧ ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಮಂಡಿಸಲು ಕ್ರಮ ತೆಗೆದುಕೊಳ್ಳುವಂತೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಹೊಸದಾಗಿ ಪಡಿತರ ಚೀಟಿ ಕೋರಿ 2023-24 ರಲ್ಲಿ 2,95,986 ಮತ್ತು 2024-25 ರಲ್ಲಿ 97,464 ಸೇರಿ ಒಟ್ಟು 3,93,450 ಅರ್ಹ ಅರ್ಜಿಗಳಿದ್ದವು. ಈ ಪೈಕಿ 3,05,325 ಅರ್ಹ ಅರ್ಜಿಗಳಿದ್ದವು. ಅವುಗಳಲ್ಲಿ ‘ಇ-ಶ್ರಮ್’ ನೋಂದಾಯಿತ 8,766 ಮತ್ತು ಅರಣ್ಯವಾಸಿಗಳಿಗೆ ವಿತರಿಸಿದ 573 ಕಾರ್ಡ್ ಸೇರಿ ಒಟ್ಟು 2,04,760 ಅರ್ಜಿಗಳಿಗೆ ಇಲಾಖೆಯು ಹೊಸ ಕಾರ್ಡ್‌ಗಳನ್ನು ವಿತರಿಸಿದೆ. 88,125 ಅರ್ಜಿಗಳು ತಿರಸ್ಕೃತಗೊಂಡಿವೆ. ವಿವಿಧ ಕಾರಣಗಳಿಗೆ 1,00,565 ಅರ್ಜಿಗಳಿಗೆ ಕಾರ್ಡ್ ವಿತರಣೆ ಬಾಕಿ ಇದೆ.