Join The Telegram | Join The WhatsApp |
ಬೆಂಗಳೂರು-
ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊದನ್ನು ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡಿದ್ರೆ 6 ತಿಂಗಳು ಕಾರ್ಡ್ ಅಮಾನತು ಆಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಅಕ್ರಮವಾಗಿ ಪಡಿತರ ಆಹಾರ ಧಾನ್ಯ ಮಾರಾಟಕ್ಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಅನ್ಯಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಫಲಾನುಭವಿಗಳ ಪಡಿತರ ಚೀಟಿ ಆರು ತಿಂಗಳು ಅಮಾನತು ಆಗಲಿದೆ. ಜೊತೆಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಆಹಾರ ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ. ಇನ್ನು ರಾಜ್ಯದಲ್ಲಿ 1,17,01,012 ಬಿಪಿಎಲ್ ಕಾರ್ಡ್ ಗಳು, 10,92,580 ಅಂತ್ಯೋದಯ ಹಾಗೂ 21,05,000 ಎಪಿಎಲ್ ಕಾರ್ಡ್ ಸೇರಿ ಒಟ್ಟು 1,48,98,592 ಕಾರ್ಡ್ ಗಳಿವೆ.
Join The Telegram | Join The WhatsApp |