ಬೆಳಗಾವಿ : ವಾಕರಸಾ ಸಂಸ್ಥೆ ಚಾಲಕ ಮತ್ತು ನಿರ್ವಾಹಕರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಕಾರಣ ದೈನಂದಿನ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಅನೇಕ ಪತ್ರಗಳ ಮೂಲಕ ತಿಳಿಸಲಾಗಿದೆ.

ಚುನಾವಣಾ ಕಾರ್ಯಕ್ಕಾಗಿ ವಾಹನಗಳನ್ನು ಪೂರೈಸುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳಿಂದ ಬೇಡಿಕೆಗಳು ಬರುತ್ತಿದ್ದು, ನಿಗದಿತ ಎಲ್ಲಾ ಅನುಸೂಚಿಗಳ ಕಾರ್ಯಾಚರಣೆಯೊಂದಿಗೆ ಹೆಚ್ಚುವರಿ ವಾಹನಗಳನ್ನು ಪೂರೈಸಬೇಕಾಗಿರುವುದರಿಂದ ಏ.30 ರಿಂದ ಜಾರಿಗೆ ಬರುವಂತೆ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಬಾರದು.
ಒಂದು ವೇಳೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿ ಚುನಾವಣಾ ಕಾರ್ಯಕ್ಕೆ ಅಡತಡೆ ಉಂಟಾದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಜನತಾ ಪ್ರಾತಿನಿಧ್ಯ ಅಧಿನಿಯಮ ದಡಿಯಲ್ಲಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ವಿಭಾಗದ ವಾಕರಸಾ ಸಂಸ್ಥೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.