ಬೆಳಗಾವಿ : ಕಂಗ್ರಾಳಿ ನಗರ ವ್ಯಾಪ್ತಿಯಲ್ಲಿ ಬರುವ ಕೆ.ಎಸ್.ಅರ್.ಪಿ ತರಬೇತಿ ಶಾಲೆ, ಬೆಳಗಾವಿ ಘಟಕದ ಆವರಣದಲ್ಲಿ ಒಟ್ಟು 53 ನೀಲಗಿರಿ ಮರಗಳನ್ನು ತೆರವುಗೊಳಿಸಲು ಪ್ರಾಂಶಪಾಲರು ಸಲ್ಲಿಸಿರುವ ಮೇರೆಗೆ ಸದರಿ ಪ್ರದೇಶದಲ್ಲಿ ಇರುವ ಮರಗಳು 50 ಮರಗಳಿಗಿಂತ ಹೆಚ್ಚಿಗೆ ಇರುವದರಿಂದ ಕರ್ನಾಟಕ ಮರಗಳ ಕಾಯ್ದೆ ೧೯೭೬ ನಿಯಮ ೮ (೩) (vii) ಪ್ರಕಾರ ಪಬ್ಲಿಕ್ ಡಾಮೆನನಲ್ಲಿ ಸಾರ್ವಜನಿಕರಿಂದ ಆಕ್ಷೇಷಣೆ ಅಹವಾಲು ಪಡೆಯಬೇಕಾಗಿರುತ್ತದೆ.
ಒಂದು ವೇಳೆ 7 ದಿನಗಳೊಳಗಾಗಿ ಯಾವುದೇ ಆಕ್ಷೇಪಣೆ ಸ್ವೀಕೃತವಾಗದಿದ್ದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.