ಹೆಬ್ರಿ :ಹೆಬ್ರಿ ತಾಲೂಕು ಐದನೆಯ ಸಾಹಿತ್ಯ ಸಮ್ಮೇಳನ – ಪೂರ್ವ ಭಾವಿ ಸಭೆ.ದಿನಾಂಕ 29/12/2024 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವಪುರ ಇಲ್ಲಿ ಹೆಬ್ರಿ ತಾಲೂಕು ಐದನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ತಾಲೂಕು ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಅವರು ವಹಿಸಿದ್ದರು.ಗೌರವ ಕಾರ್ಯದರ್ಶಿಗಳಾದ ಡಾ| ಪ್ರವೀಣ್ ಕುಮಾರ್ ಮತ್ತು ಮಂಜುನಾಥ ಕುಲಾಲ್ ಶಿವಪುರ ಅವರು ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಿವಪುರ ಗ್ರಾ.ಪಂ ಅಧ್ಯಕ್ಷರಾದ ಶೋಭಾ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಗುಲಾಬಿ, ಶಿವಪುರ ಗ್ರಾಮದ ಪ್ರಮುಖರಾದ ಶಂಕರನಾರಾಯಣ ಕೊಡಂಚ,ಮೋಹನದಾಸ ನಾಯಕ್, ಮಂಜುನಾಥರಾವ್, ಸುರೇಶ ಶೆಟ್ಟಿ, ವಿಶ್ವನಾಥ ನಾಯಕ್ ಮತ್ತಿತರ ಸುಮಾರು ಎಪ್ಪತ್ತು ಗೌರವಾನ್ವಿತ ನಾಗರಿಕ ಬಂಧುಗಳು ಭಾಗವಹಿಸಿ ಉತ್ಸಾಹದಿಂದ ಸಲಹೆ ಸೂಚನೆ ನೀಡಿ ಶಿವಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಸರ್ವ ಸಹಕಾರವನ್ನು ಘೋಷಿಸಿದರು.

ಹೆಬ್ರಿ ತಾಲೂಕು ಐದನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಗಣೇಶ ಹಾಂಡ ಹಾಗೂ ಸಂಚಾಲಕರಾಗಿ ರಮಾನಂದ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಸಾಹಿತ್ಯಾಸಕ್ತರು , ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು ಮತ್ತು ಊರವರು ಈ ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಮಹೇಶ ಹೈಕಾಡಿ ಧನ್ಯವಾದವಿತ್ತರು.