Join The Telegram | Join The WhatsApp |
ಅಥಣಿ:
ಅಥಣಿಯ ಹಿರಿಯ ಮುಖಂಡ ಎಸ್.ಕೆ. ಬುಟಾಳಿ ಅವರು ಹಾಲುಮತ ಸಮುದಾಯ ಹಾಗೂ ರಾಯಣ್ಣನ ಮೇಲಿನ ಅಭಿಮಾನದಿಂದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಣೆ ಮಾಡಿದ್ದಾರೆ. ಆದರ ಲೋಕಾರ್ಪಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 19ರಂದು ಅಥಣಿಗೆ ಆಗಮಿಸಲಿದ್ದಾರೆ. ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರು ಹೇಳಿದರು.
ಅವರು ಪಟ್ಟಣದ ಎಸ್.ಕೆ ಬುಟಾಳಿ ಅವರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಾತಿ ರಾಜಕಾರಣ ಬದಿಗಿಟ್ಟು ಎಸ್.ಕೆ ಬುಟಾಳಿ ಅವರು ರಾಯಣ್ಣ ಮೂರ್ತಿ ಪ್ರತಿಷ್ಠಾಪಣೆ ಮಾಡಿದ್ದು ಸ್ವಾಗತಾರ್ಹ. ಡಿಸೆಂಬರ್ 19ರಂದು ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ, ಎಂ.ಬಿ ಪಾಟೀಲ, ರಾವಸಾಹೇಬ ಬೆವನೂರ, ಪ್ರಕಾಶ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳಕರ, ಭೈರತಿ ಸುರೇಶ ಸೇರಿದಂತೆ ಪೂಜ್ಯರು ಹಾಗೂ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
ಮುಖಂಡ ಎಸ್.ಕೆ ಬುಟಾಳಿ ಮಾತನಾಡಿ, ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಮಹಾನ್ ಪುರುಷನ ಮೂರ್ತಿ ಪ್ರತಿಷ್ಠಾಪಣೆ ಕೆಲಸ ಮಾಡುವುದು ನನ್ನ ಪುಣ್ಯ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನಾನು ಮಾತು ಕೊಟ್ಟಿದ್ದರ ಫಲವಾಗಿ ಮೂರ್ತಿ ನಿರ್ಮಾಣ ಮಾಡಲಾಗಿದೆ ಹೊರತು ದುರುದ್ದೇಶಕ್ಕಲ್ಲ. ಈ ಕಾರ್ಯಕ್ರಮಕ್ಕೆ ಸರ್ವ ಜನತೆ ಆಗಮಿಸಬೇಕು. ಎಂದು ಮನವಿ ಮಾಡಿದರು.
ಅನಂತರ ರಾವಸಾಹೇಬ ಬೆವನೂರ ಅವರು ಮಾತನಾಡಿದರು, ಈ ವೇಳೆ ಚಿದಾನಂದ ಮುಕುಣಿ, ಶ್ಯಾಮರಾವ ಪೂಜಾರಿ, ಅಸ್ಲಂ ನಾಲಬಂದ, ರಮೇಶ ಸಿಂದಗಿ, ಅನೀಲ ಸುಣಧೋಳಿ, ಬಸವರಾಜ ಗುಮಟ ರವಿ ಬಡಶಂಬಿ, ರಾವಸಾಬ ಐಹೊಳೆ, ವಿಲೀನರಾಜ ಯಳಮಲ್ಲೆ, ಬಸವರಾಜ ಹಳ್ಳದಮಳ, ಸುಭಾಶ ಪಾಟಣಕರ, ಸಯ್ಯದಮೀನ ಗದ್ಯಾಳ, ಬೀರಪ್ಪ ಯಕ್ಕಂಚಿ ಸೇರಿದಂತೆ ಇತರರಿದ್ದರು.
Join The Telegram | Join The WhatsApp |