ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ದಿ. ಕರುಣಾಕರನ್ ಅವರ ಪುತ್ರಿ ಹಾಗೂ ಕಾಂಗ್ರೆಸ್ ನಾಯಕಿ ಪದ್ಮಜಾ ವೇಣುಗೋಪಾಲ ಬಿಜೆಪಿ ಸೇರುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ.
ಪದ್ಮಜಾ ಅವರು ಬಿಜೆಪಿ ಸೇರುವ ಕುರಿತಾದ ವರದಿಗಳನ್ನು ತಳ್ಳಿಹಾಕಿದ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ತೆಗೆದು ಹಾಕಿದ ಬಳಿಕ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಿದಾಡಿವೆ.
ಬಿಜೆಪಿ ಸೇರುವ ವದಂತಿಗಳ ಬಗ್ಗೆ ಹೇಳಿಕೆ ನೀಡಿದ್ದ ಅವರು, ಇದು ಕೇವಲ ಊಹಾಪೋಹ ಎಂದು ಹೇಳಿದ್ದರು. ನಂತರ ಫೇಸ್ಬುಕ್ನಲ್ಲಿ ಇಂತಹ ಗಾಳಿ ಸುದ್ದಿಗಳನ್ನು ತಳಿ ಹಾಕಿ ಪೋಸ್ಟ್ ಹಾಕಿದ್ದರು. ಇದೀಗ ಅದನ್ನು ಕೂಡ ಅಳಿಸಿ ಹಾಕಿದ್ದಾರೆ.
ಪದ್ಮಜಾ ಅವರು ಬಹುತೇಕ ಬಿಜೆಪಿ ಸೇರುವುದು ಖಚಿತ ಎಂದು ಕೇರಳ ಮಾಧ್ಯಮಗಳು ಕೂಡ ವರದಿ ಮಾಡಿವೆ.