ಶಿವಮೊಗ್ಗ:
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಕೀಲಿ ವೃತ್ತಿಗೆ ಮರಳಿದ್ದಾರೆ.
ಬೆಂಗಳೂರಿನ ವಕೀಲ ಸಂಘದಲ್ಲಿ ವಕೀಲ ವೃತ್ತಿ ಮುಂದುವರಿಸುವ ಕುರಿತು ಪ್ರಮಾಣ ಪತ್ರ ಸಲ್ಲಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.
ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅವರಿಗೆ ಆರ್ಥಿಕ ಸಂಕಷ್ಟ ತಲೆದೋರಿತ್ತು. ಇದರಿಂದ ಹೊರಬರಲು ಹಳೆಯ ವೃತ್ತಿಗೆ ಮರಳಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಅವರಿಗೆ ತೀರ್ಥಹಳ್ಳಿಯ ಮತದಾರ ಕೈ ಹಿಡಿಯಲಿಲ್ಲ. ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಎಂದು ಹೇಳಿಕೊಳ್ಳದಿದ್ದರು ಅವರ ಹೆಸರು ಅಲ್ಲಲ್ಲಿ ಕೇಳಿ ಬರುತಿತ್ತು. ಶುಕ್ರವಾರ ಸಿಎಂ ಹಾದಿಯಾಗಿ ಸಚಿವ ಸಂಪುಟವೇ ಶಿವಮೊಗ್ಗದಲ್ಲಿ ಇರಲಿದ್ದು ಕಿಮ್ಮನೆ ಅವರ ಜತೆ ಮಾತುಕತೆ ನಡೆಸಲಿದ್ದಾರೆಯೇ ಕಾದು ನೋಡಬೇಕಿದೆ.