ಬೆಳಗಾವಿ: ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಜಪಾನ್ ಮತ್ತು ಇಂಗ್ಲೆಂಡ್ ದೇಶಗಳನ್ನು ಹಿಂದೆ ಹಾಕಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ. ಇನ್ನೂ ಕೆಲವೆ ವರ್ಷದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೊದಲ ಸ್ಥಾನದಲ್ಲಿ ತರುವುದು ನರೇಂದ್ರ ಮೋದಿಯವರ ಗುರಿ ಆಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.‌

ಲೋಕಸಭಾ ಚುನಾವಣೆಯ ಅಂಗವಾಗಿ ಮೂಡಲಗಿ- ಅರಭಾವಿ ಮತಕ್ಷೇತ್ರದ ಕುಲಗೋಡ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಭಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು,
ದಿನದ 24 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಎಂದರೆ ಅದು ನರೇಂದ್ರ ಮೋದಿಯವರು. ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದಲ್ಲಿ ಹೋಗಳಿದ್ದು ಒಬ್ಬನೆ ರಾಜಕಾರಣಿ ಅದು ನರೇಂದ್ರ ಮೋದಿ. 543 ಲೋಕಸಭಾ ಕ್ಷೇತ್ರದಲ್ಲಿ 200 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ.‌ ಅದರಲ್ಲಿ 2 ಕ್ಷೇತ್ರ ಈಗಾಗಲೇ ಬಿಜೆಪಿ ಗೆದ್ದಂತೆ ಆಗಿದೆ. ಬಹುಮತ ಸಿಗಬೇಕು ಎಂದರೆ 375 ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಆದರೆ ಈ ಕಾಂಗ್ರೆಸ್ ನವರು ಯಾವ ಆಧಾರದ ಮೇಲೆ ಗ್ಯಾರಂಟಿ ತಗೆದುಕೊಂಡು ಹೋಗುತ್ತಿದ್ದಾರೆ ಗೊತ್ತಿಲ್ಲ ಎಂದು ಮುರುಗೇಶ ನಿರಾಣಿ ಅವರು ತಿಳಿಸಿದರು.

ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಈ ಹಿಂದೆ ಇಡೀ ಬೆಳಗಾವಿ ಜಿಲ್ಲೆಯ ಪ್ರವಾಸ ಮಾಡಿ, ಈ ಕ್ಷೇತ್ರದ ಸಮಸ್ಯೆ ಆಲಿಸಿದ್ದೆನೆ. 2000 ನೆ ಇಸ್ವಿಯಲ್ಲಿ ಕುಲಗೋಡಗೆ ಬಂದು, ಜನರ ಸಮಸ್ಯೆ ಆಲಿಸಿದ್ದೇನೆ.‌ ನಾನು ಹೊರಗಿನವರು ಎಂದು ಹೇಳುತ್ತಿರುವರು ಅವತ್ತು ಇರಲೇ ಇಲ್ಲ. ಮಹಾಂತೇಶ
ಕವಟಗಿಮಠ ಅವರು ಕೂಡಾ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂದು ಇದ್ದರು. ಆದರೆ ನಮಗೆ ಟಿಕೆಟ್ ಸಿಕ್ಕ ನಂತರ ನಮ್ಮ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ 10 ವರ್ಷದ ಸಾಧನೆ ನಮ್ಮ ಕಣ್ಣಮುಂದೆ ಇದೆ. ಇಂದು ಬೆಳಗ್ಗೆ ಪಾಕಿಸ್ತಾನದ ಪ್ರತಿಪಕ್ಷದ ನಾಯಕ ಕೂಡಾ ಅಲ್ಲಿಯ ಲೀಡರ್ ಗಳಿಗೆ ಹೇಳಿದ್ದಾರೆ. ಇಂದು ಭಾರತ ಸೂಪರ್ ಪಾವರ್ ಆಗಿದೆ. ಪಾಕಿಸ್ತಾನದವರು ನಾವು ಏನು ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಮೀಸಲಾತಿ. ಮಹಿಳೆಯರಿಗೆ ಗ್ಯಾಸ್ ವಿತರಣೆ, ವಿಮಾ ಯೋಜನೆ, ಜನ ಔಷಧ ಕೇಂದ್ರದ ಮೂಲಕ ಔಷಧ ವಿತರಣೆ, ಕಿಸಾನ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಖಾತೆ ಹಣ ನೀಡಲಾಗುತ್ತಿದೆ.‌ ಇಡೀ ಜಗತ್ತಿನಯಲ್ಲಿ ದೇಶ ಸೂಪರ್ ಪಾವರ್ ಮಾಡುವುದು ಮೋದಿಯವರ ಗ್ಯಾರಂಟಿ ಆಗಿದೆ. ಮುಂದಿನ ದಿನಗಳಲ್ಲಿ ಕಾಮನ್ ಸಿವಿಲ್ ಕೋರ್ಟ್ ಜಾರಿಗೆ ಬರಲಿದೆ. ಬೆಳಗಾವಿಯಲ್ಲಿ ಸಾಕಷ್ಟು ಶುಗರ್ ಕಾರ್ಖಾನೆ ಇದೆ. ಆದರೂ ಉದ್ಯೋಗ ಸೃಷ್ಟಿ ಮಾಡಲು ಬೇರೆ ಬೇರೆ ಕಾರ್ಖಾನೆ ಸ್ಥಾಪನೆ ಮಾಡಬೇಕು ಎಂದರು.‌

ಬಾಲಚಂದ್ರ ಜಾರಕಿಹೊಳಿ ಅವರು ಹೆಚ್ಚು ಮಾತನಾಡದೆ ಕೆಲಸ ಮಾಡುತ್ತಾರೆ. ಅವರು ಒಬ್ಬ ಕಿಂಗ್ ಮೇಕರ್, ಯಾವುದೇ ಸರ್ಕಾರ ಇದ್ದರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂದು ತಿಳಿಸಿದರು.

ಈ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶುಭಾಸ ಪಾಟೀಲ್, ಜೆಡಿಎಸ್ ಅಧ್ಯಕ್ಷ ಪ್ರಕಾಶ ಕಾಡಸೆಟ್ಟಿ, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.‌