ಕೊಲಂಬೋ : ಶ್ರೀಲಂಕಾದ ಅಂಡರ್-19 ಕ್ರಿಕೆಟ್ ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನಾ ಅವರನ್ನು ಮಂಗಳವಾರ ರಾತ್ರಿ ಶ್ರೀಲಂಕಾದ ಅಂಲಂಗೋಡದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆ ನಡೆದಾಗ ನಿರೋಶನಾ ಕುಟುಂಬಸ್ಥರ ಜೊತೆಗಿದ್ದರು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಿರೋಶನಾ ಅವರು ಉತ್ತಮ ಆಲ್‌ರೌಂಡರ್ ಆಗಿದ್ದು, ಅವರು ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ.