ಗದಗ : ಭಾನುವಾರ ಮುಂಜಾನೆ ವೇಳೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ದೇಹಗಳು ಛಿದ್ರಗೊಂಡಿವೆ. ಮೃತಪಟ್ಟವರೆಲ್ಲರೂ ದೇವಸ್ಥಾನಕ್ಕೆ ಹೊರಟಿದ್ದರು. ನೇರವಾದ ರಸ್ತೆಯಲ್ಲಿ ಎರಡೂ ವಾಹನಗಳು ಪರಸ್ಪರ ಅಪ್ಪಳಿಸಿದ್ದು ಸಣ್ಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತಪಟ್ಟವರಾಗಿದ್ದಾರೆ. ಬಸ್ ಇಳಕಲ್ನಿಂದ ಹುಬ್ಬಳ್ಳಿ ಗೆ ಹೊರಟ್ಟಿತ್ತು. ಕಾರು ಹಾವೇರಿಯಿಂದ ಕಲ್ಲಾಪುರ ಕಡೆಗೆ ಸಾಗುತ್ತಿತ್ತು. ಕಲ್ಲಾಪುರ ಬಸವೇಶ್ವರ ದೇವಸ್ಥಾನಕ್ಕೆ ಕುಟುಂಬವು ಹೊರಟಿತ್ತು. ಕೊಣ್ಣೂರು ಬಳಿಕ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಘಾತಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.