
ನಾಲ್ಕೂರು : ನೇತಾಜಿ ಸೇವಾ ವೇದಿಕೆ ಇದರ 15 ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುದ್ರಾಡಿ ಶಾಲೆಯ ಮುಖ್ಯ ಶಿಕ್ಷಕರು, ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಇವರಿಗೆ ಹುಟ್ಟೂರ ಅಭಿನಂದನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ .ಎ.ಸುವರ್ಣ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ, ನೇತಾಜಿ ಸೇವಾ ವೇದಿಕೆಯ ಅಧ್ಯಕ್ಷ ಅವಿನಾಶ್ ರಾವ್ CA, ಸ್ಥಾಪಕಾಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ, ರೊಟರಿ ಕ್ಲಬ್ ಕೊಕ್ಕರ್ಣೆಯ ಅಧ್ಯಕ್ಷ ಕಾಶಿನಾಥ ಶೆಣೈ, ಪ್ರಧಾನ ಕಾರ್ಯದರ್ಶಿ ಶಶಿದರ ಸೆಟ್ಟಿಗಾರ್, ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ ಆಚಾರ್ಯ ಮಾರಾಳಿ, ವೇದಿಕೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು.