ಬೆಳಗಾವಿ: ನಗರದ ಪೊಲೀಸ್ ಕಮಿಷನರ್ ಪತ್ನಿ ಹೆಸರಲ್ಲಿ ನಕಲಿ ಫೇಸ್‌ ಬುಕ್ ತೆರೆದು ಅವರ ಸ್ನೇಹಿತರಿಂದ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಿದ್ದಾರೆ. ಖಾತೆ ತೆರೆದ ವಂಚಕರು, ಕಮಿಷನರ್ ಪತ್ನಿಯ ಭಾವಚಿತ್ರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದ ಆರೋಪಿಗಳು, ಹಲವು ಜನರಿಗೆ ಸ್ನೇಹದ ಮನವಿ ಕಳುಹಿಸಿದ್ದರು. ಮನವಿ ಸ್ವೀಕರಿಸಿದವರಿಗೆ ಹಣಕ್ಕೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದಾರೆ. ಈ ಬಗ್ಗೆ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.