ಬೆಳಗಾವಿ : ಶಿವಗಿರಿ ಕೋ ಆಫ್ ಕ್ರೆಡಿಟ್ ಸೊಸೈಟಿ ಹಾಗೂ ಬಿಲ್ಲವರ ಅಸೋಸಿಯೇಷನ್ ನ ಸಹಯೋಗದೊಂದಿಗೆ ದಿನಾಂಕ 01/06/2025ರಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನಗರದ ಸೊಸೈಟಿಯ ಕಾರ್ಯಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಡೆಕ್ಕನ್ ಆಸ್ಪತ್ರೆಯ ಖ್ಯಾತ ವೈದ್ಯ ರಮೇಶ ದೊಡ್ಡಣ್ಣವರ್,ಜಿ ಜಿ ಚಿಟ್ನೀಸ್ ಸ್ಕೂಲ್ ನ ಪ್ರಾಂಶುಪಾಲೆ ನವೀನಾ ಶೆಟ್ಟಿಗಾರ್ ಮತ್ತು ಶಹಾಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಣಿಕಂಠ ಪೂಜಾರಿ ಆಗಮಿಸಿದ್ದರು. ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ರಮೇಶ ದೊಡ್ಡಣ್ಣವರ, ವಿದ್ಯಾರ್ಥಿಗಳು ಟಿವಿ ಹಾಗೂ ಮೊಬೈಲ್ ನಿಂದ ದೂರ ಇದ್ದು ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದರು

ಇನ್ಸ್ ಪೆಕ್ಟರ್ ಮಣಿಕಂಠ ಪೂಜಾರಿ ಅವರು ಟಿವಿ ಹಾಗೂ ಮೊಬೈಲ್ ನಿಂದ ವಿದ್ಯಾರ್ಥಿಗಳು ದೂರ ಇರುವಂತೆ ಸಲಹೆ ನೀಡಿ ವಿದ್ಯಾರ್ಥಿಗಳು ಒತ್ತಡವಿಲ್ಲದೆ ತಮ್ಮ ಅಭ್ಯಾಸದ ಮೂಲಕ ತಮ್ಮ ಗುರಿ ಮುಟ್ಟಬೇಕು. ಪೋಷಕರು ಯಾವುದೇ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹಾಕಬಾರದು ಎಂದರು.

ನವೀನಾ ಶೆಟ್ಟಿಗಾರ್ ಸಂಸ್ಥೆಯ ಕಾರ್ಯಕ್ರಮವನ್ನು ಪ್ರಶಂಸಿಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಮಾತನಾಡಿ, ಮಕ್ಕಳ ಮೇಲೆ ಪೋಷಕರು ಯಾವುದೇ ಒತ್ತಡ ಹೇರದೆ ಅವರ ಇಚ್ಚೆಯನ್ನು ಅರಿತು ಅವರನ್ನು ಪ್ರೋತ್ಸಾಹಿಸಿ ಎಂದರು.

ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ ಮಾತನಾಡಿ, ಸಂಸ್ಥೆಯಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಿ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆ ಸದಾ ಸಿದ್ಧವಿದೆ ಎಂದು ಹೇಳಿದರು.

  • ಸಂಘದ ಉಪಾಧ್ಯಕ್ಷ ಸುಂದರ್ ಕೋಟ್ಯಾನ್ ಉಪಸ್ಥಿತರಿದ್ದರು. ಬಿಲ್ಲವ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು, ಸೊಸೈಟಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು ಪುಸ್ತಕಗಳನ್ನು ಪಡೆದುಕೊಂಡರು. ವ್ಯವಸ್ಥಾಪಕ ಚಂದ್ರ ಎಚ್. ಪೂಜಾರಿ ನಿರೂಪಿಸಿದರು.