ರಾಮನಾಥಪುರಂ: ಲೋಕಸಭೆ ಚುನಾವಣೆಗೆ ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರಿಗೆ ಚುನಾವಣಾ ಆಯೋಗ ಹಲಸಿನ ಹಣ್ಣನ್ನು ಚಿಹ್ನೆಯಾಗಿದೆ ನೀಡಿದೆ. ಅದರ ಬಳಿಕ ಅವರ ಅಭಿಮಾನಿಗಳು ಎಲ್ಲೆಡೆ ಹಲಸಿನ ಹಣ್ಣು ಖರೀದಿಗೆ ಸಭೆಗಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆ ಯಲ್ಲಿ ಹಲಸು ಮಾರಾಟ ದಿಢೀರ್ ಹೆಚ್ಚಳವಾಗಿದೆ. ಪ್ರತಿದಿನ 30 ರಿಂದ 40 ಟನ್‌ಗಳಷ್ಟು ಹಲಸು ಮಾರಾಟವಾಗುತ್ತಿದೆ ಎಂದು ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ. ಎಐಎಡಿಎಂಕೆ ನಾಯಕರಾಗಿದ್ದ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಪರ್‌ಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹೀಗಾಗಿ ಅವರು ಪಕ್ಷೇತರರಾಗಿ ಚುನಾವಣೆಗೆ ನಿಂತಿದ್ದಾರೆ.