ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳ ಹಲವಾರು ನಿವಾಸಿಗಳು ಕಳೆದ ಕೆಲವು ದಿನಗಳಿಂದ ಸಾಮೂಹಿಕ ಕೂದಲು ಉದುರುವಿಕೆ ತೊಂದರೆ ಎದುರಿಸುತ್ತಿದ್ದು, ನಂತರ ಒಂದು ವಾರದೊಳಗೆ ಅವರ ತಲೆ ಬೋಳಾಗಿದೆ.

ಸಾಮೂಹಿಕ ಕೂದಲು ಉದುರುವಿಕೆಯ ಹಿಂದೆ ರಸಗೊಬ್ಬರಗಳಿಂದ ಉಂಟಾಗುವ ಜಲಮಾಲಿನ್ಯ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಅಧಿಕಾರಿಗಳು ಆ ಪ್ರದೇಶದಲ್ಲಿನ ನೀರಿನ ಮಾದರಿಗಳನ್ನು ಮತ್ತು ಗ್ರಾಮಸ್ಥರ ಕೂದಲು ಮತ್ತು ಚರ್ಮದ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ.

ಮೂರು ಗ್ರಾಮಗಳಾದ ಬೋರ್ಗಾಂವ, ಕಲ್ವಾಡ್ ಮತ್ತು ಹಿಂಗ್ನಾ ಗ್ರಾಮಗಳು ಬುಲ್ಧಾನ ಜಿಲ್ಲೆಯ ಶೇಗಾಂವ್ ತೆಹಸಿಲ್‌ನಲ್ಲಿವೆ. ಕಳೆದ ಕೆಲವು ದಿನಗಳಿಂದ ಪುರುಷರು ಮತ್ತು ಮಹಿಳೆಯರಿಗೆ ಕೂದಲು ಉದುರುತ್ತಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಕೂದಲು ಉದುರುವಿಕೆ ಪ್ರಾರಂಭವಾದ ನಂತರ, ವ್ಯಕ್ತಿಯು ಒಂದು ವಾರದೊಳಗೆ ಬೋಳಾಗುತ್ತಾನೆ.

ಹೇಗೆ ತಮ್ಮ ತಲೆಯ ಮೇಲಿನ ಕೂದಲು ಉದುರುತ್ತಿದೆ ಎಂಬುದನ್ನು ಹಲವಾರು ಜನರು ತೋರಿಸಿದ್ದಾರೆ. ಇತರರು ಒಂದು ವಾರದೊಳಗೆ ಬೆಳವಣಿಗೆಯಾದ ಬೋಳು ತಲೆಗಳನ್ನು ತೋರಿಸಿದ್ದಾರೆ. ಮೂರು ಗ್ರಾಮಗಳ ಗ್ರಾಮಸ್ಥರು ಭಯಭೀತರಾಗಿರುವುದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಗ್ರಾಮಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ತಂಡದ ಪ್ರಕಾರ, ಸುಮಾರು 50 ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದೆ ಮತ್ತು ವೈದ್ಯರು ಈ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚರ್ಮ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಲುಷಿತ ನೀರು ಮತ್ತು ಆರೋಗ್ಯ ಸಮಸ್ಯೆಯಿಂದ ಈ ತ್ವರಿತ ಕೂದಲು ಉದುರುವಿಕೆ ಉಂಟಾಗಬಹುದು ಎಂದು ವೈದ್ಯರು ನಂಬಿದ್ದಾರೆ. ಸಾಮೂಹಿಕ ಕೂದಲು ಉದುರುವಿಕೆಗೆ ಕಾರಣವನ್ನು ಗುರುತಿಸಲು ವೈದ್ಯರು ಟೆಸ್ಟ್‌ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ, ತಮ್ಮ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸುವಂತೆ ಹಳ್ಳಿಗಳ ಜನರಲ್ಲಿ ಕೇಳಿಕೊಂಡಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ತಂಡದಲ್ಲಿ ಶೇಗಾಂವ್ ಆರೋಗ್ಯಾಧಿಕಾರಿ ಡಾ.ದೀಪಾಲಿ ರಾಹೇಕರ ಅವರು ಇದ್ದರು. “ಇದು ಕಲುಷಿತ ನೀರಿನಿಂದ ಆಗಿರಬಹುದು. ನಾವು ಮಾದರಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ಕಾರಣ ಯಾವುದೆಂದು ತಿಳಿಯಲು ಅವುಗಳನ್ನು ಪರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.