Join The Telegram | Join The WhatsApp |
ಹೆಬ್ರಿ :
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನಿಯಲು ಗಣೇಶ ಶೆಣೈ ಆಯ್ಕೆಯಾಗಿದ್ದಾರೆ.
ಗಣೇಶ ಶೆಣೈ ಮುನಿಯಾಲು ಪದ್ಮನಾಭ ಶೆಣೈ ಮತ್ತು ಸುಮತಿ ದಂಪತಿಗಳ ಪುತ್ರರಾಗಿದ್ದು, ಗಣೇಶ ಅವರು ಕಬ್ಬಿನಾಲೆಯಲ್ಲಿ ಜನಿಸಿದವರು. ಇವರು ಪ್ರಕಾಶಕರಾಗಿ 40 ವರ್ಷಗಳಿಂದ ನೂರಾರು ಪುಸ್ತಕಗಳ ಪ್ರಕಟಣೆ, ಲೇಖಕರಾಗಿ, ಪತ್ರಿಕೆಗಳಲ್ಲಿ ಬರಹಗಾರರಾಗಿ 3000 ಕ್ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಇವರ ಅನುಪಮ ಸಾಹಿತ್ಯ ಸೇವೆ ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Join The Telegram | Join The WhatsApp |