ಬೆಳಗಾವಿ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹಾಗೂ ಕೇಂದ್ರ ಸಚಿವ ಶ್ರೀಪಾದ ನಾಯಿಕ ಅವರನ್ನು ಭೇಟಿಯಾದರು.ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸತತವಾಗಿ ಸಚಿವ ಸ್ಥಾನ ಅಲಂಕರಿಸುತ್ತ ಬಂದಿರುವ ಶ್ರೀಪಾದ ನಾಯಿಕ ಅವರನ್ನು ಆತ್ಮಿಯವಾಗಿ ಅಭಿನಂದಿಸಲಾಯಿತು. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರನ್ನು ಭೇಟಿಯಾಗಿ ಬೆಳಗಾವಿ-ಗೋವಾ ತಿಲಾರಿ ಮೂಲಕ ಹೆದ್ದಾರಿಯಲ್ಲಿ ಮನೋಹರ ಅಂತರರಾಷ್ಟ್ರೀಯ ವಿಮಾನ ನಿಲ್ದಾನ ಮೋಫಾ ವರೆಗೆ ಸಂಚಾರ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಹಾಗೂ ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಪ್ರಯಾಣಿಸುತ್ತಿರುವ ವಾಹನಗಳಿಗೆ ಅನಾವಶ್ಯಕವಾಗಿ ಗೋವಾ ಪೋಲಿಸರು ತೊಂದರೆ ನೀಡಬಾರದೆಂದು ಸೂಚಿಸಲು ಅನಿಲ ಬೆನಕೆ ಮನವಿ ಮಾಡಿಕೊಂಡರು.