Join The Telegram | Join The WhatsApp |
ಬೆಳಗಾವಿ :
ಗೋಕಾಕ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಬಿಜೆಪಿ ಯುವನಾಯಕ ಮತ್ತು ಸಕಲ ಮರಾಠಾ ಸಮಾಜದ ಧುರೀಣ ಕಿರಣ ಜಾಧವ ಅವರ ಜನ್ಮದಿನ ಪ್ರಯುಕ್ತ ಬೆಳಗಾವಿಗೆ ಆಗಮಿಸಿ ಶುಭ ಹಾರೈಸಿದರು.
ಬೆಳಗಾವಿಯಲ್ಲಿ ಏರ್ಪಡಿಸಿದ್ದ ಕಿರಣ ಜಾಧವ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೋಕಾಕ ಸಾಹುಕಾರ್ ರಮೇಶ ಜಾರಕಿಹೊಳಿ ಅವರು,
ಕಿರಣ ಜಾಧವ ಅವರು ಕೈಗೊಂಡಿರುವ ಸಾಮಾಜಿಕ ಸೇವೆಯನ್ನು ಕೊಂಡಾಡಿ ಬರುವ ದಿನಗಳಲ್ಲಿ ಕಿರಣ ಜಾಧವ ಅವರ ರಾಜಕೀಯ ಜೀವನ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ ಮನ್ನೋಳ್ಕರ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join The Telegram | Join The WhatsApp |