Join The Telegram | Join The WhatsApp |
ವಾಷಿಂಗ್ಟನ್-
ಭಾರತದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾದ, ಕಳೆದ ವರ್ಷದ ಸೂಪರ್ ಹಿಟ್ ಸಿನೆಮಾ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು 2023ರ ಗೋಲ್ಡನ್ ಗ್ಲೋಬ್ ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದಿದೆ. ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಆರ್ ಆರ್ ಆರ್ ನದ್ದು.
ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ತೆಲುಗು ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಚಿತ್ರವು ‘ಅತ್ಯುತ್ತಮ ಇಂಗ್ಲೀಷೇತರ ಚಿತ್ರ’ ಎಂದು ನಾಮನಿರ್ದೇಶನಗೊಂಡಿದೆ. ಚಿತ್ರದಲ್ಲಿ ತೆಲುಗು ಟ್ರ್ಯಾಕ್ “ನಾಟು ನಾಟು” ನ್ನು ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಸಾಹಿತ್ಯ ಬರೆದಿದ್ದಾರೆ. ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕೀರವಾಣಿ ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.ಹಿಟ್ ಹಾಡನ್ನು 2021 ರಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಅಧಿಕೃತ ನಿವಾಸದ ಮುಂದೆ ಚಿತ್ರೀಕರಿಸಲಾಗಿದೆ. ನಾಟು ನಾಟು, ನಾಲ್ಕೂವರೆ ನಿಮಿಷಗಳ ಸ್ಟಾಂಪರ್ ಹಾಡಿನಲ್ಲಿ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.
1920 ರ ದಶಕದಲ್ಲಿ ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ – ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ NTR, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Join The Telegram | Join The WhatsApp |