ನವದೆಹಲಿ: ಹಬ್ಬದ ಋತುಗಳ ಆರಂಭ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣವಾಗುತ್ತಿರುವ ಬೆನ್ನಲ್ಲೇ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿದೆ. ಶುಕ್ರವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ದ ಚಿನ್ನದ ದರ ಪ್ರತಿ 10 ಗ್ರಾಂಗೆ 110 ರು. ಏರಿಕೆಯಾಗಿ 79,980ಕ್ಕೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ದಾಖಲೆ ಬೆಲೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ150 ರು.ಏರಿದೆ. 78,325 ರು. ಕೋಲ್ಕತಾದಲ್ಲಿ 78,295 ರು., ಚೆನ್ನೈನಲ್ಲಿ 78, 320 ರು. ಹಾಗೂ ಮುಂಬೈನಲ್ಲಿ 78,065 ರು.ಗೆ ತಲುಪಿದೆ. ಬೆಳ್ಳಿ ದರ ಬೆಂಗಳೂರಿನಲ್ಲಿ ಪ್ರತಿ ಕೇಜಿಗೆ 1,100 ರು. ಏರಿಕೆಯಾಗಿ 98,200 ರು, ತಲುಪಿದೆ. ದೆಹಲಿಯಲ್ಲಿ 94,200 ರು., ಚೆನ್ನೈನಲ್ಲಿ 1,01,000 ರು., ಮುಂಬೈ, ಕೋಲ್ಕತಾದಲ್ಲಿ 95,000 ರು.ನಷ್ಟಿದೆ.