ನವದೆಹಲಿ: ರಷ್ಯಾ – ಉಕ್ರೇನ್ ಸಂಘರ್ಷ, ಇಸ್ರೇಲ್ – ಹಿಜ್ಜುಲ್ಲಾ- ಹಮಾಸ್ ಉಗ್ರರ ನಡುವೆ ಯುದ್ದದ ಭೀತಿಯ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರ ದಾಖಲೆ ಮಟ್ಟಕ್ಕೆ ಏರಿವೆ. ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸಾರ್ವಕಾಲಿಕ 77850 ರು.ಗೆ ತಲುಪಿದ್ದರೆ, ಚೆನ್ನೈನಲ್ಲಿ 1 ಕೆಜಿ ಬೆಳ್ಳಿ ಬೆಲೆ ದಾಖಲೆಯ 1,01,000 ರು. ಮುಟ್ಟಿದೆ.

ಇನ್ನು ಬೆಂಗಳೂರು ಪೇಟೆಯಲ್ಲಿಸ್ಟಾಂಡರ್ಡ್ ಚಿನ್ನ 10 ಗ್ರಾಂಗೆ 77,550 ರು., ಆಭರಣ ಚಿನ್ನ 1 ಗ್ರಾಂಗೆ 7,173 ರು. ಹಾಗೂ 1 ಕೆಜಿ ಬೆಳ್ಳಿ ಬೆಲೆ 93,200 ರು.ಗೆ
ಏರಿದೆ.

ದಿಲ್ಲಿಯಲ್ಲಿ ಭಾರಿ ಏರಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬುಧವಾರ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 900 ರು. ಏರಿಕೆ ಕಂಡು 77,850 ರು.ಗೆ ತಲುಪಿದೆ.