Join The Telegram | Join The WhatsApp |
ಬೆಂಗಳೂರು-
ಕುರಿ ಸಾಕಾಣೆದಾರರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಒಂದು ಮೇಕೆ ಸೇರಿದಂತೆ ಒಟ್ಟು 21 ಕುರಿಗಳನ್ನು ನೀಡುವ ‘ಅಮೃತ ಸ್ವಾಭಿಮಾನಿ ಕುರಿಗಾಹಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ 354.50 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಈ ಯೋಜನೆ ಅಡಿ ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ನೀಡಲಾಗುತ್ತಿದ್ದು, ಜೊತೆಗೆ ಕುರಿಗಾಹಿ ಘಟಕಗಳನ್ನು ನಿರ್ವಹಿಸುವ ಸಲುವಾಗಿ 1.75 ಲಕ್ಷ ರೂಪಾಯಿಗಳಂತೆ 20,000 ಘಟಕಗಳಿಗೆ ಅನುದಾನ ನೀಡಲಾಗುತ್ತದೆ.
ಈ ಯೋಜನೆಗಾಗಿ ಕೇಂದ್ರ ಸರ್ಕಾರ ಶೇಕಡ 50ರಷ್ಟು, ರಾಜ್ಯ ಸರ್ಕಾರ ಶೇಕಡ 25ರಷ್ಟು ಆರ್ಥಿಕ ನೆರವು ನೀಡಲಿದ್ದು, ಉಳಿದ ಶೇಕಡ 25ರಷ್ಟು ಮೊತ್ತವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.
Join The Telegram | Join The WhatsApp |