Join The Telegram | Join The WhatsApp |
ಬೆಂಗಳೂರು:
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸ ಆದ್ಯತಾ ಪಡಿತರ ಚೀಟಿ ಕಾರ್ಡ್ ಹಂಚಿಕೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಹೊಸದಾಗಿ ಬಿಪಿಎಲ್ ಕಾರ್ಡ್ ಹಂಚಿಕೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆದೇಶ ಹೊರಡಿಸಿದ್ದು, ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಹೊಸದಾಗಿ 1,55,927 ಕಾರ್ಡ್ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.
ಈ ವರ್ಷದ ಆಗಸ್ಟ್ ಅಂತ್ಯದ ವರೆಗೆ ಬಿಪಿಎಲ್ ಕಾರ್ಡ್‌ಗಾಗಿ ಸುಮಾರು 2,77,662 ಅರ್ಜಿಗಳು ಆನ್ ಲೈನ್ ಮೂಲಕ ಸಲ್ಲಿಕೆ ಆಗಿದ್ದವು. ಈಗ ಅವುಗಳ ಪರಿಶೀಲನೆ ಮಾಡಿ ಅದರಲ್ಲಿ ಅರ್ಹ 1,55,927 ಅರ್ಜಿಗಳಿಗೆ ಕಾರ್ಡ್ ನೀಡಲು ಸರ್ಕಾರ ಆದೇಶಿಸಿದೆ.
ಹೊಸ ಕಾರ್ಡ್ ನೀಡುವೆ ವೇಳೆ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ಪಾಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಹಾಗೂ ಕಾರ್ಡ್ ಹಂಚಿಕೆ ವೇಳೆ 2017 ರಿಂದ 2021ರ ವರೆಗೆ ಅರ್ಜಿ ಸಲ್ಲಿಕೆಯಾದವರಿಗೆ ಮೊದಲ ಆದ್ಯತೆ ನೀಡಬೇಕು ಎಂದೂ ಸೂಚಿಸಿದೆ. ಅಲ್ಲದೆ ಕಾರ್ಡ್ ಹಂಚಿಕೆ ವೇಳೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.
Join The Telegram | Join The WhatsApp |