ಸಹಕಾರಿ ಸಂಘವು ರೈತರ ಹಾಗೂ ಗ್ರಾಹಕರ ಸೇವೆಗೆ ಬದ್ದವಾಗಿದೆ. ಕೃಷಿ, ಹೈನುಗಾರಿಕೆ ಸೇರಿದಂತೆ ಇನ್ನಿತರ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಸ್ಫಂದಿಸುತ್ತಿದೆ. ಸಾಮಾಜಿಕ ಸೇವೆಗೆ ಮುತುವರ್ಜಿ ನೀಡಲಾಗುತ್ತಿದೆ. ಜನರ ಆರೋಗ್ಯ ಸೇವೆಗಾಗಿ ಸೇವೆಯ ಗುರಿಯೊಂದಿಗೆ ಗೋಳಿಯಂಗಡಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಆರಂಭಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೆಳ್ವೆ ಪ್ರಧಾನ ಕಚೇರಿ ನವೀಕರಣ ಕಟ್ಟಡ ಹಾಗೂ ಶುದ್ಧ ತೆಂಗಿನೆಣ್ಣೆ ತಯಾರಿಕಾ ಘಟಕವನ್ನು ಆರಂಭಿಸಲಾಗುವುದು-ಎಸ್.ಜಯರಾಮ ಶೆಟ್ಟಿ ಸೂರ‍್ಗೋಳಿ, ಅಧ್ಯಕ್ಷ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ,ನಿ,ಬೆಳ್ವೆ.

 

ಬೆಳ್ವೆ : ಕೃಷಿ ಚಟುವಟಿಕೆಗಳ ವ್ಯವಹಾರಕ್ಕೆ ಸೀಮಿತವಾಗಿದ್ದ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢತೆಯನ್ನು ಹೊಂದಿ ಗ್ರಾಹಕರಿಗೆ ವಿವಿಧೋದ್ಧೇಶಗಳಿಗೆ ಪೂರಕವಾಗಿ ಸ್ಫಂದಿಸುವ ಮೂಲಕ ಹೆಚ್ಚಿನ ಸಾಧನೆ ಹೊಂದುತ್ತಿವೆ. ಈ ನಿಟ್ಟಿನಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉತ್ತಮ ಕಾರ್ಯ ಸಾಧನೆ, ಸಾಮಾಜಿಕ ಸೇವಾ ಕಾಳಜಿ ಪ್ರಶಂಸನೀಯ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಗೋಳಿಯಂಗಡಿಯಲ್ಲಿ ನೂತನವಾಗಿ ಆರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಭಾರತೀಯಜನೌಷಧಿ ಕೇಂದ್ರವನ್ನು ಆರಂಭಿಸುವ ಮೂಲಕ ಜನರಿಗೆ ಉತ್ತಮ ಸೌಲಭ್ಯ ನೀಡಲಿದೆ. ಜನೌಷಧಿ ಕೇಂದ್ರದಲ್ಲಿ ಕಡಿಮೆಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳಿಗೆ ವೈದ್ಯರು ಜನರಿಗೆ ಸರಿಯಾದ ಮಾಹಿತಿಗಳನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಹಿತಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ರೈತರಿಗೆ ಶೂನ್ಯ ಬಡ್ಡಿಯಲ್ಲಿ ನೀಡುತ್ತಿದ್ದ ರೂ.3 ಲಕ್ಷ ಸಾಲವನ್ನು ರೂ.5 ಲಕ್ಷಕ್ಕೆ ನೀಡುವ ಬಗ್ಗೆ ಘೋಷಣೆಯಾದರೆ ಸಾಲದು ಅನುಷ್ಠಾನಗೊಳ್ಳಬೇಕು ಎಂದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸೂರ‍್ಗೋಳಿ ಅಧ್ಯಕ್ಷತೆ ವಹಿಸಿದ್ದರು.

ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ರಾಜೇಶ್ವರಿ ಎ.ಜಿ, ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಜ್ಞಾ
ಶರ್ಮಾ, ಕಟ್ಟಡ ಮಾಲಕ ವೈ.ಬಾಲಕೃಷ್ಣ ಭಟ್, ಸಂಘದ
ನಿರ್ದೇಶಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿದರು. ಐಶ್ವರ್ಯ ಜೋಗಿ ಗೋಳಿಯಂಗಡಿ
ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಉಪಾಧ್ಯಕ್ಷ ಬಿ.ಹರೀಶ್ ಕಿಣಿ ವಂದಿಸಿದರು.