ಮುಂಬಯಿ : ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಏಕನಾಥ ಶಿಂದೆ ಅವರ ನೇತೃತ್ವದ ಎನ್ ಡಿ ಎ ಸರಕಾರ ಇದೀಗ ಗಣಪತಿ ಭಕ್ತರಿಗೆ ವಿಶೇಷ ವಿನಾಯಿತಿ ಘೋಷಣೆ ಮಾಡಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಗಣಪತಿ ವೀಕ್ಷಣೆಗೆ ತೆರಳುವ ಭಕ್ತರಿಗೆ ಟೋಲ್ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.
ಈ ಟೋಲ್ ವಿನಾಯಿತಿಯು ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಮತ್ತು PWD ಸಚಿವಾಲಯದ ಅಡಿಯಲ್ಲಿ ಕೊಂಕಣಕ್ಕೆ ಹೋಗುವ ಎಲ್ಲಾ ಇತರ ರಸ್ತೆಗಳಲ್ಲಿ ಮಾನ್ಯವಾಗಿರುತ್ತದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಆದೇಶದ ಮೇರೆಗೆ ಈ ವಿನಾಯಿತಿ ನೀಡಲಾಗಿದೆ. 5ನೇ ಸೆಪ್ಟೆಂಬರ್‌ನಿಂದ 19ನೇ ಸೆಪ್ಟೆಂಬರ್ 2024ರ ನಡುವೆ ಮೇಲೆ ತಿಳಿಸಿದ ಮಾರ್ಗಗಳಲ್ಲಿ ಹೆಚ್ಚುವರಿ ಟೋಲ್ ವಿನಾಯಿತಿ ಇದೆ ಎಂದು CMO ಬುಧವಾರ ತಿಳಿಸಿದೆ.