ಕೊಂಜಾಡಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಕರ್ಷಕ ಬಣ್ಣ ಹೊಸ ರೂಪದೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಕಂಗೊಳಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು,ಗುಣ ಮಟ್ಟದ
ಶಿಕ್ಷಣಕ್ಕೆ ಅವಕಾಶವಿದ್ದರೂ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಆರ್ಡಿ ಸಮೀಪದ ಕೊಂಜಾಡಿ (ಕಲ್ಮರ್ಗಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ
ದಾಖಲಾತಿ ಹೆಚ್ಚಿಸುವಲ್ಲಿ ಇತರ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತು ಪ್ರಥಮ ಹಂತದಲ್ಲಿ ಪೋಷಕರು, ಮಕ್ಕಳೊಂದಿಗೆ ಸಮಾಲೋಚನಾ ಸಭೆ,ಶಾಲಾ ವ್ಯಾಪ್ತಿಯ ಕಲ್ಮರ್ಗಿ,
ತೂಂಬಿನಕೆರೆ, ಬರೆಗದ್ದೆ, ಅಲ್ಬಾಡಿ, 9ನೇ ಮೈಲ್‌ಕಲ್ಲು,
ಕೂಸಿನತೋಟ,ಐದು ಸೆಂಟ್ಸ್(ಜನತಾ ಕಾಲೋನಿ),ತೊನ್ನಾಸೆ ಸುತ್ತ ಮುತ್ತಲಿನ ಭಾಗಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ,ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಕ್ಕಳ ಪೋಷಕರ ಮನವೊಲಿಸಲಾಗಿದೆ. ವಿನೂತನ ಸೌಲಭ್ಯಗಳ ಕಾರ್ಯಕ್ರಮಗಳನ್ನು ಹಿಂದಿನ ವರ್ಷಗಳಂತೆ ಈ ಶೈಕ್ಷಣಿಕ ವರ್ಷವೂ ನೀಡಲಾಗುತ್ತಿದೆ.
ಉಚಿತ ಸೌಲಭ್ಯಗಳು: ದಾನಿಗಳ ಸಹಕಾರದಲ್ಲಿ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್, ಕ್ರೀಡಾ ಸಮವಸ್ತ್ರ,ಕ್ರೀಢಾ ಸೌಲಭ್ಯಗಳು, ಶೈಕ್ಷಣಿಕ ಪ್ರವಾಸ, ಶಾಲಾ ವಾರ್ಷೀಕೋತ್ಸವ, ತರಕಾರಿ, ಹೂವಿನ ತೋಟ ನಿರ್ಮಾಣ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಸೌಲಭ್ಯಗಳು, ವಿನೂತನ ಮಾದರಿ ಕಾರ್ಯಕ್ರಮಗಳನ್ನು
ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ಕಾಯಂ ಶಿಕ್ಷಕರ ನೇಮಕ:
ಕೊಂಜಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1959 ರಲ್ಲಿ ಆರಂಭಗೊಂಡು ಸಾವಿರಾರೂ ಮಕ್ಕಳ ವಿದ್ಯಾಭ್ಯಾಸಕ್ಕೆ ವರಧಾನವಾಗಿತ್ತು, ಕಾಲ ಕ್ರಮೇಣ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದೇ ಈ ಭಾಗದ ಸಾಕಷ್ಟು ಮಕ್ಕಳು ಹೊರ ಭಾಗದ ಖಾಸಗಿ, ಸರ್ಕಾರಿ ಶಾಲೆಗಳಿಗೆ ದಾಖಲಾತಿಗೊಂಡು ಮಕ್ಕಳ ಸಂಖ್ಯೆ ಇಳಿಮುಖವಾಗಿತು. 2016-17 ರ ಶೈಕ್ಷಣಿಕ ಸಾಲಿನ ಆರಂಭದಲ್ಲಿ ಶಿಕ್ಷಣ ಇಲಾಖೆಯಿಂದ ಕಾಯಂ ಶಿಕ್ಷಕಿಯ ನೇಮಕ, ಎಂಟು ತಿಂಗಳ ನಂತರ ಮುಖ್ಯ ಶಿಕ್ಷಕರ ನೇಮಕವಾಗಿದೆ. ಆ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ 23
ಮಕ್ಕಳು ವ್ಯಾಸಂಗ ಮಾಡಿದ್ದಾರೆ. 2017-18 ರಲ್ಲಿ ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ,ಸಹ ಶಿಕ್ಷಕಿ ಸರಿತಾ ಶೆಟ್ಟಿ, ಗೌರವ ಶಿಕ್ಷಕಿ ಯಶೋಧ ನೇತ್ರತ್ವದಲ್ಲಿ ಎಸ್‌ಡಿಎಂಸಿ
,ಸ್ಥಳೀಯರು, ಹಳೆ ವಿದ್ಯಾರ್ಥಿಗಳು, ದಾನಿಗಳ ಸಹಕಾರದಲ್ಲಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮಗಳ ಪ್ರಯೋಗಗಳ ಫಲವಾಗಿ 15 ಮಕ್ಕಳು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡು
ಮಕ್ಕಳ ದಾಖಲಾತಿ 26 ಕ್ಕೆ ಏರಿಕೆಯಾಗಿದೆ. ಸುಮಾರು 20 ವರ್ಷಗಳ ಬಳಿಕ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಹಾಗೂ ಹಳೇ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಮಕ್ಕಳ ಪೋಷಕರಿಗೆ ಶಾಲೆಯ ಬಗ್ಗೆ ಗೌರವ ಹೆಚ್ಚಿದೆ. ದಾಖಲಾತಿ ಸಂಖ್ಯೆಯನ್ನು ಉಳಿಸಿಕೊಂಡು ಶಾಲೆ ದಿನದಿಂದ ದಿನಕ್ಕೆ ಪ್ರಗತಿಯೊಂದಿಗೆ ಹೊಸ
ಚೈತನ್ಯ ಕಂಡಿದೆ. ಮುಖ್ಯ ಶಿಕ್ಷಕ ನಾರಾಯಣ ನಾಯ್ಕ, ಸಹ ಶಿಕ್ಷಕಿ ಶಶಿಕಲಾ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.ಕಳೆದ ಸಾಲಿನಲ್ಲಿ ಸುಮಿತ್ರಾ ಕುಲಾಲ ಜ್ಞಾನದೀಪ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಶಾಲೆಯಲ್ಲಿ ಇನ್ನಷ್ಟು ಪ್ರಗತಿ,
ಮಕ್ಕಳ ದಾಖಲಾತಿ ಏರಿಕೆಯಾಗ ಬೇಕು ಎನ್ನುವುದು ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವರ್ಗ, ಹಳೆ ವಿದ್ಯಾರ್ಥಿಗಳ ಗುರಿಯಾಗಿದೆ. ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಶಾಲೆಯು ಈಗಾಗಲೇ ಆರ್ಷಕ ಬಣ್ಣದೊಂದಿಗೆ ಹೊಸ ರೂಪದೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಅಣಿಯಾಗಿದೆ.
———-
ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಶಿಕ್ಷಕ ವೃಂದದವರ ಸಹಕಾರದಲ್ಲಿ ಶಾಲೆಯ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣಕ್ಕೆ ಅವಕಾಶವಿದೆ, ಉಚಿತ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪೋಷಕರು ಮಕ್ಕಳನ್ನು
ಶಾಲೆಗೆ ದಾಖಲಿಸುವುದರೊಂದಿಗೆ ಶಾಲೆಯ ಪ್ರಗತಿಯಲ್ಲಿ ಸಹಕರಿಸ ಬೇಕು.
ಪ್ರಸಾದ್ ತೊನ್ನಾಸೆ,ಅಧ್ಯಕ್ಷರು,
ಹಳೆ ವಿದ್ಯಾರ್ಥಿ ಸಂಘ,ಸರ್ಕಾರಿ
ಕಿರಿಯ ಪ್ರಾಥಮಿಕ ಶಾಲೆ ಕೊಂಜಾಡಿ.(ಕಲ್ಮರ್ಗಿ)
—————-
ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಲ್ಲಿ ಹಾಗೂ
ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಮಕ್ಕಳ ಭವಿಷ್ಯ
ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಗಿ ಶ್ರಮಿಸುತ್ತೇವೆ. ಶಾಲೆಯಲ್ಲಿ ಮಕ್ಕಳ ದಾಖಾಲಾತಿ ಹೆಚ್ಚಿಸುವಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳು,
ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗುವುದು.
ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ
ಸಹಕರಿಸ ಬೇಕು – ನಾರಾಯಣ ನಾಯ್ಕ,
ಮುಖ್ಯ ಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಕೊಂಜಾಡಿ (ಕಲ್ಮರ್ಗಿ)
———————–
ಶಾಲೆಯಲ್ಲಿ ಉತ್ತಮ ವ್ಯವಸ್ಥೆಗಳಿವೆ.ಮಕ್ಕಳನ್ನು
ದಾಖಲಾತಿಸುವಂತೆ ಪೋಷಕರಿಗೆ ತಿಳಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಹಿಂದೆ ದಾನಿಗಳು, ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ನೀಡುತ್ತಿದ್ದ ಕೆಲವು ಸೌಲಭ್ಯಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.ಶಾಲೆಯ ಪ್ರಗತಿಯಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ.- ಗೋಪಾಲ
ನಾಯ್ಕ,ಕಲ್ಮರ್ಗಿ, ಅಧ್ಯಕ್ಷರು,ಎಸ್‌ಡಿಎಂಸಿ
, ಸ.ಕಿ.ಪ್ರಾ.ಶಾಲೆ,
ಕೊಂಜಾಡಿ (ಕಲ್ಮರ್ಗಿ)
———————-
ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಲ್ಲಿ ಹಾಗೂ ಶಾಲೆಯ
ಕೀರ್ತಿ ಹೆಚ್ಚಿಸುವಲ್ಲಿ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು
ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ
ಶ್ರಮಿಸುತ್ತೇವೆ. ಶಾಲೆಯಲ್ಲಿ ಮಕ್ಕಳ ದಾಖಾಲಾತಿ
ಹೆಚ್ಚಿಸುವಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ
ಸಹಕಾರದೊಂದಿಗೆ ವಿವಿಧ ಸೌಲಭ್ಯಗಳು,
ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗುವುದು.
ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ
ಸಹಕರಿಸ ಬೇಕು – ನಾರಾಯಣ ನಾಯ್ಕ,
ಮುಖ್ಯ ಶಿಕ್ಷಕರು,
ಸ.ಕಿ.ಪ್ರಾ.ಶಾಲೆ, ಕೊಂಜಾಡಿ (ಕಲ್ಮರ್ಗಿ)
———————–