ಚಂಡೀಗಢ: ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಸಿಧು ಮೂಸೆವಾಲಾ ಅವರ ತಾಯಿ ಈಗ ತುಂಬು ಗರ್ಭಿಣಿ.

ಸಿಧು ಮೂಸೆವಾಲಾ ಅವರ ಪೋಷಕರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಅವರು ಬರುವ ಮಾರ್ಚ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಮಗುವಿನ ಸ್ವಾಗತಕ್ಕೆ ಕಾತರರಾಗಿದ್ದಾರೆ.

ಸಿದ್ದು ಅವರ ತಂದೆ ಬಲಕೋರ್
ಸಿಂಗ್ 60ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಂದೆ-ತಾಯಿಗೆ ಸಿಧು ಮೂಸೆವಾಲಾ ಒಬ್ಬನೇ ಪುತ್ರ.2022ರ ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಗ್ಯಾಂಗ್ ಸ್ಟಾರ್ ಗೋಲ್ಡಿಬ್ರಾರ್ ಗ್ಯಾಂಗ್ ಸ್ಟಾರ್ ನಿಂದ ಮೂಸೆವಾಲಾ ಹತರಾಗಿದ್ದರು. ಇದೀಗ
ಮೂಸೆವಾಲಾ ಅವರ ಪರಿವಾರದಲ್ಲಿ ಮತ್ತೆ ಸಂತಸ ಮೂಡಿದ್ದು ಅವರ ತಾಯಿ ಪೋಷಕರಾಗುತ್ತಿರುವುದು ಬಹಳ ಖುಷಿಗೆ ಕಾರಣವಾಗಿದೆ.