ಮಂಗಳೂರು : ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಟಿಕೆಟ್ ದರ ಸಾಕಷ್ಟು ಏರಿಕೆಗೊಂಡಿದೆ. ಕೊಲ್ಲಿ ರಾಷಗಳಿಗೆ ಸಾಮಾನ್ಯ ಟಿಕೆಟ್ ದರ 17 ರಿಂದ 20 ಸಾವಿರ ವರೆಗೆ ಇರುತ್ತದೆ. ಆದರೆ, ಇತ್ತೀಚಿಗೆ ಈ ದರ ದುಪ್ಪಟ್ಟಾಗಿದೆ. ದಮಾಮ್, ದುಬೈ, ಅಬುಧಾಬಿ, ದೋಹಾದಿಂದ ಮಂಗಳೂರಿಗೆ ಬರುವವರು ಟಿಕೆಟ್ ಗೆ ಈಗ ₹ 50,000 ಪಾವತಿಸಬೇಕಾಗಿದೆ. ಬೇಸಿಗೆ ರಜೆ ಸೇರಿದಂತೆ ವಿವಿಧ ಕಾರಣಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿರುವ ಉದ್ಯೋಗಸ್ಥರು ತಾಯ್ನಾಡಿಗೆ ಮರಳುತ್ತಾರೆ. ಇದೇ ಅವಧಿಯಲ್ಲಿ ಇದೀಗ ವಿಮಾನ ಟಿಕೆಟ್ ದರ ಏರಿಕೆ ಮಾಡಿರುವುದು ಕರಾವಳಿ ಭಾಗದ ಪ್ರಯಾಣಿಕರಿಗೆ ಭಾರಿ ಆರ್ಥಿಕ ಹೊಡೆತ ನೀಡಿದೆ.