ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ದೇವಾಲಯ ಹಾಗೂ ಕೆಲ ಪ್ರದೇಶಗಳು ಜಲಾವೃತಗೊಂಡಿವೆ.ಹಬ್ಬಾನಟ್ಟಿ ಗ್ರಾಮದ ಸ್ವಯಂಭೂ ಆಂಜನೇಯ ದೇವಾಲಯ ಗುರುವಾರ ಮಧ್ಯಾಹ್ನ ಸಂಪೂರ್ಣ ಮಲಪ್ರಭೆಯಲ್ಲಿ ಜಲಾವೃತಗೊಂಡಿದೆ. ಕಣಕುಂಬಿ, ಜಂಬೋಟಿ, ನಾಗರ ಗಾಳಿ, ಭೀಮಗಢ ಮತ್ತು ಲೋಂಡಾ ಅರಣ್ಯ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದೆ. ಖಾನಾಪುರ ತಾಲೂಕಿನ 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ನಿಲುಗಡೆಗೊಂಡಿದೆ. ಒಟ್ಟಾರೆ ಖಾನಾಪುರ ತಾಲೂಕಿನಲ್ಲಿ ಹರಿಯುವ ನದಿಗಳು ತುಂಬಿಕೊಂಡಿದ್ದು ಕೃಷಿ ಚಟುವಟಿಕೆ ಜೋರಾಗಿದೆ. ಒಂದು ವಾರದಿಂದ ಮಳೆ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿದೆ.