
ಬೆಂಗಳೂರು: ಬೆಂಗಳೂರಿನ ಗೃಹ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ ಅವರು ಭೇಟಿ ಮಾಡಿದರು.
ಹೌದು… ತನ್ನ ಸರಳ ವ್ಯಕ್ತಿತ್ವದಿಂದಲೇ ವೀಕ್ಷಕರ ಮನ ಗೆದ್ದು, ಕನ್ನಡದ ಬಿಗ್ ಬಾಸ್ ದಲ್ಲಿ ವಿಜೇತನಾದ ಹಾವೇರಿ ಜಿಲ್ಲೆಯ ಹನುಮಂತ ಲಮಾಣಿ ಅವರು ಇಂದು ಸರಳ, ಸಜ್ಜನಿಕೆಯ ಸಾಹುಕಾರ್ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ ಮಾತನಾಡಿ, ಸರಳ ಸಜ್ಜನಿಕೆ ಸಾಹುಕಾರ್ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಇಂದು ನೋಡಿ ಮಾತನಾಡಿದ್ದು, ತುಂಬಾನೇ ಖುಷಿಯಾಯ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಅರವೀಂದ ಕಾರ್ಚಿ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.