Join The Telegram | Join The WhatsApp |
ವಿಜಯಪುರ :
ಪರಿಶಿಷ್ಟರಿಗೆ ಪ್ರಮಾಣ ಹೆಚ್ಚಳ ವಿಷಯದಲ್ಲಿ ನಮ್ಮ ಸರಕಾರ ಬದ್ಧತೆ ತೋರಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಲಿತರಿಗೆ ಮೀಸಲು ಪ್ರಮಾಣ ಹೆಚ್ಚಿಸಿದ್ದಾರೆ.
ನಾಗ ಮೋಹನದಾಸ ವರದಿ ಒಪ್ಪಿ ಪರಿಶಿಷ್ಟ ಜಾತಿ ಮೀಸಲು ಪ್ರಮಾಣ ಶೇಕಡಾ 17ಕ್ಕೆ ಏರಿಕೆ ಮಾಡಿ ಅವರು ಬದ್ಧತೆ ತೋರಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಅಧಿಕಾರದಲ್ಲಿತ್ತು. ಆದರೆ, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕೆಲಸವನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಸಾಧ್ಯವಾಗಿದೆ. ಆದರೆ, ಇಂಥ ಕಾರ್ಯಕ್ರಮ ಮಾಡಿಯೇ ಗೊತ್ತಿಲ್ಲದ ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವ ಕೆಲಸವನ್ನು ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಟೀಕಿಸುವ ನೈತಿಕತೆ ಇಲ್ಲ ಎಂದು ಅವರು ಹರಿಹಾಯ್ದರು.
Join The Telegram | Join The WhatsApp |