ಮುಂಬೈ : ಮುಂಬೈಯಲ್ಲಿ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿದ್ದಾಗಲೇ ಎದೆನೋವು ಬಂದು ಕುಕ್ಕೆಹಳ್ಳಿ ವಿಠ್ಠಲ ಪ್ರಭು ವಿಧಿವಶರಾಗಿದ್ದಾರೆ.

ಶನಿವಾರ ಕುಕ್ಕೆಹಳ್ಳಿ ವಿಠ್ಠಲ ಪ್ರಭು ಅವರ ನಿರ್ದೇಶನದಲ್ಲಿ ಯಕ್ಷಗಾನ ನಡೆಯುತ್ತಿತ್ತು. ಭಾಗವತಿಕೆ ನಡೆಸುತ್ತಿದ್ದ ವೇಳೆ ಎದೆ ನೋವು ಬಂದ ಕಾರಣ ಬೇರೊಬ್ಬ ಭಾಗವತರಿಗೆ ಭಾಗವತಿಕೆ ಒಪ್ಪಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಇಹಲೋಕ ತ್ಯಜಿಸಿದರು. ಮುಂಬೈಯಲ್ಲಿ ಯಕ್ಷಗಾನ ಪರಿಚಯಿಸಲು ತನ್ನದೇ ತಂಡ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಳಿಸುತ್ತಿದ್ದರು. ಯಕ್ಷಗಾನ ನಿರ್ದೇಶನ, ಪಾತ್ರಧಾರಿಕೆ, ತಾಳಮದ್ದಳೆ ಹೇಳಿಕೊಡುತ್ತಿದ್ದರು. ಮರಾಠಿ ಮತ್ತು ಕೊಂಕಣಿ ಭಾಷೆಗಳಲ್ಲೂ ಯಕ್ಷಗಾನ ಹೇಳಿಕೊಡುತ್ತಿದ್ದರು.