ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ, ” ಉತ್ತಮ ಶಿಕ್ಷಕ ” ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಖ್ಯಾತ ವಾಗ್ಮಿ, ಲೇಖಕ, ಚಿಂತಕ ಡಾ . ಕೆ. ಪಿ. ಪುತ್ತುರಾಯ ಅವರು ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿ ಒಂದು ಶಿಕ್ಷಣ ಸಂಸ್ಥೆಯ ಏಳಿಗೆಗೆ ಆಡಳಿತ ಮಂಡಳಿ , ಶಿಕ್ಷಕರು, ಪೋಷಕರು, ಮಕ್ಕಳು ಮತ್ತು ಸಾರ್ವಜನಿಕರು ಈ ಐದು ವಿಭಾಗ ಬಹಳ ಮುಖ್ಯ. ಇದರಲ್ಲಿಯೂ ಶಿಕ್ಷಕರ ಪಾತ್ರ ಬಹಳ ಅಮೂಲ್ಯವಾದದು. ಹೆತ್ತವರ ನಂತರ ನಾವು ಪೂಜೆ ಮಾಡುವುದಿದ್ದರೆ ಅದು ಗುರುಗಳಿಗೆ ಮಾತ್ರ. ಗುರುವಿನಲ್ಲಿ ನಾವು ತ್ರಿಮೂರ್ತಿಗಳನ್ನು ಕಾಣುತ್ತೇವೆ. ಶಿಕ್ಷಕರಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ತಮ್ಮ ವೃತ್ತಿಯ ಬಗ್ಗೆ ಪ್ರೀತಿ , ಸಂತೋಷ, ಗೌರವ, ಹೆಮ್ಮೆ ಇರಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಸ್ಮರಣಿಕೆ ನೀಡಿ ಗೌರವಿಸಿದರು. ಹಾಸ್ಟೆಲ್ ಕಮಿಟಿಯ ಸದಸ್ಯ ರಾಮಕೃಷ್ಣ ಆಚಾರ್ಯ , ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಅರುಣ್ ಎಚ್. ವೈ. ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ, ಉಪನ್ಯಾಸಕರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿಜಯಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.