ಹೆಬ್ರಿ: ಕನ್ನಡ ಭಾಷೆಯ ಜಾಗೃತಿ ನಮಗೆ ಬೇಕು. ಸರ್ಕಾರ ಕನ್ನಡ ಮತ್ತು ಕನ್ನಡ ಮನಸ್ಸುಗಳಿಗೆ ಬೆಲೆ ಸಿಗುವ ರೀತಿಯಲ್ಲಿ ಸ್ಪಂದಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ರಿ ತಾಲೂಕು ಘಟಕದ ವತಿಯಿಂದ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ರೂವಾರಿ ಗಂಧಶಾಲಿಯ ಹೊಂಬೆಳಕು’ ಇದರ ಸಮಾರೋಪ ಭಾಷಣ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಗತ್ತಿನ ಮಾದರಿ ಸಂಸ್ಥೆಯಾಗಿದ್ದು, ಹೋಬಳಿ ಘಟಕದಿಂದ ದೇಶದವರೆಗೂ ಸಾಹಿತ್ಯದ ಸೇವೆ ಮಾಡುತ್ತದೆ. ಇಲ್ಲಿ ಆಯೋಜಿಸಲಾದ ಸಮ್ಮೇಳನ ದೊಡ್ಡ ಮಟ್ಟದಲ್ಲಿ ಮೂಡಿಬಂದಿದ್ದು, ಮಾದರಿಯಾಗಿದೆ ಎಂದು ಶ್ಲಾಘಿದರು.

ಕಸಾಪ ಪೋಷಕಿ ಸರೋಜಾ ಪುಂಡಲೀಕ ಹಾಲಂಬಿ ಬೆಂಗಳೂರು ಮಾತನಾಡಿ, ಹಳ್ಳಿಯ ವಿದ್ಯಾರ್ಥಿಗಳು 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಾರೆ. ಅವರು ಮುಂದಿನ ಶಿಕ್ಷಣ ಸಹ ಕನ್ನಡ ಮಾಧ್ಯಮದಲ್ಲಿ ಮಾಡುವಂತೆ ಶಿಕ್ಷಕರು ಪ್ರೇರೇಪಿಸಬೇಕು.
ಸರ್ಕಾರ ಇದಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅವರು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಾಹಿತಿ ಹರಿದಾಸ ಬಿ.ಸಿ.ರಾವ್ ಮಾತನಾಡಿ, ಶಿವಪುರದ ಸಮ್ಮೇಳನ ಸಾರ್ಥಕವಾಗಿದೆ. ಹೊಟ್ಟೆಕಿಚ್ಚು ಅಸೂಯೆ ಕೆಡುಕನ್ನು ಬಯಸದೆ ಅನ್ನೋನ್ಯವಾಗಿ ಬದುಕುವ ಮನಸ್ಸು ಸರ್ವರಿಗೂ ಬರಲಿ ಎಂದರು.

ಸಮಾಜ ಸೇವಕ ಡಾ.ಶಿವಪುರ ಅನಂತ ಭಟ್ ಗದಗ, ಸರೋಜಾ ಪುಂಡಲೀಕ ಹಾಲಂಬಿ, ಕಸಾಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸಮಿತಿಯ ಗೌರವಾಧ್ಯಕ್ಷ ಶಂಕರ ನಾರಾಯಣ ಕೊಡಂಚ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಅಧ್ಯಕ್ಷ ಮಂಜು ಶಂಕರ ಬಡ್ತಿಲ್ಲಾಯ, ಸದಸ್ಯರಾದ ಸುಮಿತ್ರಾ ನಾಯ್ಕ, ಜಗನ್ನಾಥ ಕುಲಾಲ್‌, ಮುಖಂಡರಾದ ಮೋಹನ್‌ಪ್ರಸಾದ್‌ ಮೂರ್ಸಾಲು, ಡಾ.ಮೋಹನ್‌ಪ್ರಸಾದ್‌ ಮೂರ್ಸಾಲು. ವಿಶ್ವನಾಥ ನಾಯಕ್, ಜಯಲಕ್ಷ್ಮೀ ಪ್ರಭು, ರಮೇಶ ಕುಮಾರ, ಮುಖ್ಯಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಸ್ವಾಗತ ಸಮಿತಿ, ಉಪ ಸಮಿತಿ ಪದಾಧಿಕಾರಿಗಳು, ದಾನಿಗಳು ಭಾಗವಹಿಸಿದ್ದರು.

ಸ್ವಾಗತ ಸಮಿತಿಯ ಗಣೇಶ ಹಾಂಡ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುನಾಥ ಕೆ. ಸ್ವಾಗತಿಸಿದರು. ಡಾ. ಪ್ರವೀಣ್ ಕುಮಾ‌ರ್ ಎಸ್‌. ವಂದಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಮತ್ತು ಶಿಕ್ಷಕಿ ಸುಕೇತ ಭಂಡಾರಿ ನಿರೂಪಿಸಿದರು.

ಕವಿಗೋಷ್ಠಿ: ಎಂ. ಚೈತ್ರಾ, ಮಹೇಶ್ ಬೈಕಾಡಿ, ಪೂರ್ಣೇಶ್ ಹೆಬ್ರಿ, ಮಾಲತಿ ಜಿ. ಪೈ, ಅರುಣಾ ಹೆಬ್ರಿ, ಆನಂದ ಕೊಠಾರಿ ಶಿವಪುರ, ಶೋಭಾ ಆರ್. ಕಲ್ಕೂರ್, ಚೈತನ್ಯ ಶಿವಪುರ, ವೀಣಾ ಕುಮಾರಿ ಎಚ್.ಎನ್., ಸತೀಶ್ ಬೆಳಂಜೆ, ಶೋಭಾ ಶೆಟ್ಟಿ ಶಿವಪುರ ಕವನ ವಾಚಿಸಿದರು. ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾ‌ರ್ ಸಮನ್ವಯ ಮಾಡಿದರು. ಸಾಹಿತಿ, ಉಪನ್ಯಾಸಕಿ ಶ್ರೀ ಮುದ್ರಾಡಿ ಭಾಗವಹಿಸಿದ್ದರು.

ನವೀನ್ ಶೆಟ್ಟಿ ಮಡಾಮಕ್ಕಿ ನಿರೂಪಿಸಿದರು. ವೀಣಾ ಆರ್. ಭಟ್ ಸ್ವಾಗತಿಸಿದರು. ವಿದ್ಯಾ ಜನಾರ್ದನ್ ವಂದಿಸಿದರು.

ಸಾಧಕರಿಗೆ ಸನ್ಮಾನ ವಿವಿಧ ಕ್ಷೇತ್ರದ ಸಾಧಕರಾದ ಶೋಭಾ ಆರ್. ಕಲ್ಕೂರ್ (ಸಾಹಿತ್ಯ) ಗಣೇಶ್ ಕುಮಾ‌ರ್ ಹೆಬ್ರಿ (ಯಕ್ಷಗಾನ ಭಾಗವತ) ಶಂಭು ಶಿವಪುರ (ಕೃಷಿ ಕೂಲಿ ಕಾರ್ಮಿಕ) ನಾರಾಯಣ ಭಟ್ ತಿಂಗಳೆ (ಧಾರ್ಮಿಕ) ಶೀನ ಶೆಟ್ಟಿಗಾ‌ರ್ ಕೆಲಕಿಲ (ನಾಟಿ ವೈದ್ಯ) ರಾಘವೇಂದ್ರ ರಾವ್ ಪಾಂಡುಕಲ್ಲು (ಕೃಷಿ) ಕೃಷ್ಣ ಹಾಂಡ (ಗುಡಿ ಕೈಗಾರಿಕೆ) ಕೃಷ್ಣ ನಾಯ್ಕ ಬೆಳ್ವೆ (ಕೃಷಿ) ಶಂಕರ ಶೆಟ್ಟಿ ಹೊನ್ನಲ್ಲು (ನಿವೃತ್ತ ಯೋಧ) ಗಿರಿಜಾ ಹೆಗ್ಡೆ ಶೇಡಿಮನೆ (ಹೈನುಗಾರಿಕೆ) ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷೆ ಜಯಲಕ್ಷ್ಮಿ ಅಭಯ ಕುಮಾರ್ ಕಸಾಪ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಸಂಚಾಲಕ ರಮಾನಂದ ಶೆಟ್ಟಿ, ಸಾಹಿತಿ ಹರಿದಾಸ ಬಿ.ಸಿ.ರಾವ್‌ ಶಿವಪುರ, ಡಾ.ಉಷಾ ಎಚ್ ಚೈತನ್ಯ ಶಿವಪುರ ಸಹಿತ ಹಲವರನ್ನು ಸನ್ಮಾನಿಸಲಾಯಿತು.