ಕಲಬುರಗಿ: ಉಷ್ಣ ಮಾರುತಗಳಿಂದಾಗಿ
ಕಂಗೆಟ್ಟಿರುವ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ತಾಪಮಾನ ದಶಕದ ಅತೀ ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಂಗಳವಾರವಷ್ಟೇ ಈ ಜಿಲ್ಲೆಯಲ್ಲಿ ತಾಪಮಾನ 45.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಒಂದು ದಿನದಲ್ಲಿ 1.4 ಡಿಗ್ರಿ ಸೆಲ್ಸಿ ಯಸ್‌ನಷ್ಟು ತಾಪ ಹೆಚ್ಚು ದಾಖಲಾಗಿದ್ದು, ಜಿಲ್ಲೆಯ ಜನ- ಜಾನುವಾರು ಜೀವನ ದುಸ್ತರವಾಗಿದೆ. ಜಿಲ್ಲೆಯ ಕಾಳಗಿ ತಾಲೂಕು ಹಾಗೂ ಸುತ್ತಲಿನ ಪರಿಸರದಲ್ಲಿ ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.