ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತದಲ್ಲಿರುವ ಕನ್ನಡ ವಾರಪತ್ರಿಕೆ.ಕನ್ನಡದ ಪ್ರತಿಭಾವಂತ ಲೇಖಕ ಹಾಗೂ ಪ್ರಭಾವಿ ಪತ್ರಕರ್ತರಾದ ದಿ.ರವಿ ಬೆಳಗೆರೆಯವರ ಸಾರಥ್ಯದಲ್ಲಿ ಸುಮಾರು ಮೂರು ದಶಕಗಳ ಕಾಲ ಅಸಂಖ್ಯಾತ ಕೋಟಿ ಕನ್ನಡಿಗರ ಮನ ಗೆದ್ದಿತ್ತು.
1995 ರಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಕಛೆರಿಯಲ್ಲಿ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹಾಗೂ ಆರ್.ಟಿ.ವಿಠಲಮೂರ್ತಿ, ರಾ.ಸೊಮನಾಥ,ಜೋಗಿ ಮತ್ತು ಇ.ಹೆಚ್.ಸಂಗಮದೇವರವರುಗಳ ಸಮಕ್ಷಮದಲ್ಲಿ ಪ್ರಕಟಗೊಂಡಿತು. ರವಿ ಬೆಳಗೆರೆಯವರ ಸೂಜಿಗಲ್ಲಿನಂತೆ ಸೆಳೆಯುವ ಬರಹ ಕನ್ನಡ ಕುಲ ಕೋಟಿಯನ್ನು ಅಪಾರವಾಗಿ ಪ್ರೀತಿಸುವಂತೆ ಮಾಡಿತ್ತು. ಅದರಲ್ಲೂ ರವಿ ಬೆಳಗೆರೆ ಅವರು ಯುವ ಸಮೂಹವನ್ನು ನಿಬ್ಬೆರಗಿಸುವ ರೀತಿಯಲ್ಲಿ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ತಮ್ಮ ಬರಹವನ್ನು ಬರೆಯುತ್ತಿದ್ದರು. ಕನ್ನಡ ಪತ್ರಿಕೋದ್ಯಮದಲ್ಲೇ ಹಾಯ್ ಬೆಂಗಳೂರ್ ಹೊಸ ಇತಿಹಾಸ ಸೃಷ್ಟಿಸಿತ್ತು.

ಕಲಬುರಗಿ:
ಅತಿ ಶೀಘ್ರದಲ್ಲಿಯೆ ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಆರಂಭವಾಗಲಿದೆ ಎಂದು ಅದರ ಸಂಪಾದಕಿಯಾಗಿ ಕೆಲಸ ನಿರ್ವಹಿಸಲಿರುವ ಭಾವನಾ ಬೆಳಗೆರೆ ಹೇಳಿದರು.
ಬೆಂಗಳೂರಿನ “ಹಾಯ್ ಬೆಂಗಳೂರು” ಪತ್ರಿಕೆ ಕಚೇರಿಯಲ್ಲಿ ಶನಿವಾರ ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ ರವಿ ಬೆಳಗೆರೆ ಅವರ ಎರಡು ಪುಸ್ತಕಗಳಾದ ರಜನೀಶನ ಹುಡುಗಿಯರು, ಅರ್ತಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದರು.
ಅನೇಕ ದಿನಗಳಿಂದ ಓದುಗರ ಒತ್ತಡವಿದೆ. ಹಾಯ್ ಬೆಂಗಳೂರು ಮತ್ತು ಓ ಮನಸೆ ಎರಡು ಪತ್ರಿಕೆಗಳ ಆರಂಭಕ್ಕೆ ರಾಜ್ಯದ 33 ಜಿಲ್ಲೆಗಳಿಂದಲ್ಲೂ ಒತ್ತಡವಿದೆ. ಕಾರಣ ಈಗ ಬೆಳಗೆರೆ ಕುಟುಂಬ ಮತ್ತು ಪತ್ರಿಕೆಯ ವರದಿಗಾರರು ಸಿದ್ದರಾಗಿದ್ದು, ಶೀರ್ಘದಲ್ಲಿ ಪತ್ರಿಕೆ ಆರಂಭಿಸಿ ಓದುಗರ ಕೈಗೆ ನೀಡಲಾಗುವುದೆಂದು ಭಾವನಾ ಬೆಳಗೆರೆ ಹೇಳಿದರು.
ಶ್ರೀಮತಿ ಲಲಿತಾ ರವಿ ಬೆಳಗೆರೆ ಅವರು ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಪತ್ರಕರ್ತೆ ಭಾವನಾ, ಚೇತನಾ, ನಟ ಶ್ರೀನಗರ ಕಿಟ್ಟಿ, ಉಮೇಶ ಭಟ್, ವಿದ್ಯಾ ಭಟ್ ಅವರಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ಎರಡು ಪುಸ್ತಕಗಳ ಲೋಕಾರ್ಪಣೆ ನಡೆದು ಪುಸ್ತಕಗಳ ಬಗ್ಗೆ ಹಾಗೂ ಬರಹಗಾರ ರವಿ ಬೆಳಗೆರೆ ಅವರ ಭಾವನಾ ಬೆಳಗೆರೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಕುಮಾರಿ ಅವರು, ರವಿ ಬೆಳಗೆರೆ ಅವರ ಅಕ್ಷರ ಲೋಕದ ನಂಟು, ಅವರ ಬರಹದ ಬಗ್ಗೆ ವಿವರಿಸಿದರು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಹಾಯ್ ಬೆಂಗಳೂರು ಪತ್ರಿಕೆ ಓದುಗರು ಮಾತನಾಡಿ, ಪತ್ರಿಕೆ ಆರಂಭಿಸಬೇಕೆಂದು ಒತ್ತಾಯದ ಮನವಿ ಮಾಡಿದರು. ಕರ್ಣ ರವಿ ಬೆಳಗೆರೆ ಇತರರು ವೇದಿಕೆಯಲ್ಲಿ ಇದ್ದರು. ರವಿ ಬೆಳಗೆರೆ, ಅಭಿಮಾನಿಗಳು, ಓದುಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ಹಿರಿಯ ಪತ್ರಕರ್ತರಾದ ರವಿ ಕುಲಕರ್ಣಿ, ಸತೀಶ ಬಿಲ್ಲಾಡಿ, ಕಾಂತರಾಜ್ ಅರಸ್, ಶ್ರೀನಿವಾಸ, ಶರಣು ಗೊಬ್ಬುರ ಸೇರಿದಂತೆ ಅನೇಕರು ಇದ್ದರು.