ಹಿಲಿಯಾಣ ಶ್ರೀಬ್ರಹ್ಮಬೈದರ್ಕಳ ಗರೋಡಿಗೆ 400 ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ.ಊರ-ಪರವೂರ
ಭಕ್ತಾಧಿಗಳು, ದಾನಿಗಳ ಸಹಕಾರದಲ್ಲಿ 7 ತಿಂಗಳು 13 ದಿನಕ್ಕೆ ಗರೋಡಿ ಜೀರ್ಣೋದ್ಧಾರಗೊಂಡು ಪುನರ್
ಪ್ರತಿಷ್ಠಾಪನೆಗೊಂಡಿದೆ.ಗರೋಡಿಯ ಮುಂಭಾಗದಲ್ಲಿ ಶಾಶ್ವತ ತಗಡು ಚಪ್ಪರ,ಸ್ವಾಗತಗೋಪುರ,ಅವರಣಗೋಡೆ,ಬ್ರಹ್ಮಾನಂದ ರಂಗವೇದಿಕೆ
ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು, ಪ್ರತಿ ಸಂಕ್ರಮಣದಂದು ಭಕ್ತಾದಿಗಳ ಸಹಕಾರದಲ್ಲಿ ಅನ್ನಸಂತರ್ಪಣೆ ಸೇವೆ ನಡೆಯುತ್ತಿದೆ. ಗರೋಡಿಯ
ಸಮಿತಿ,ಅರ್ಚಕ ವೃಂದ,ಕೋಟಿ ಚೆನ್ನಯ್ಯ ಯುವಕ ಮಂಡಲ,ವಿವಿಧ ಸಂಘ-ಸಂಸ್ಥೆಗಳು ಗರೋಡಿಯ ಎಲ್ಲಾ
ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ. ಸಮಸ್ತರ
ಸಹಕಾರದಿಂದ ಹಿಲಿಯಾಣ ಗರೋಡಿ ಮಾದರಿ ಗರೋಡಿಯಾಗಿ
ಗುರುತಿಸಿಕೊಂಡಿರುವುದು ಸಂತಸವಾಗಿದೆ.ಮುಂದಿನ
ಅಭಿವೃದ್ಧಿ ಕಾರ್ಯಗಳಿಗೆ ಭಕ್ತರ ಸಹಕಾರ ಅಗತ್ಯವಿದೆ.
-ವೈ ಕರುಣಾಕರ ಶೆಟ್ಟಿ
ಯರುಕೋಣೆ,ಅಧ್ಯಕ್ಷರು,
ಶ್ರೀಬ್ರಹ್ಮಬೈದರ್ಕಳ
ಗರೋಡಿ,ಹಿಲಿಯಾಣ

ನೇಮೋತ್ಸವದ ಪ್ರಯುಕ್ತ ಮಾ.ಐದನೇ ಬುಧವಾರ ಮಧ್ಯಾಹ್ನ ಗಂ 12 ರಿಂದ ಮಹಾಪೂಜೆ,ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ,ಸಂಜೆ ಗಂ 4.30 ರಿಂದ ಶ್ರೀಬ್ರಹ್ಮ ಬೈದರ್ಕಳ ನೇಮೋತ್ಸವ,ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಗಂ 8 ರಿಂದ ಶಿವರಾಯನ ಗೆಂಡಸೇವೆ, ಪರಿವಾರ ದೈವಗಳ ಕೋಲ, ಇನ್ನೀತರ ಸೇವೆಗಳು,ಮಾ 6ನೇ ಗುರುವಾರ ಸಂಜೆ ಗಂ 6 ರಿಂದ ಗರೋಡಿಯಲ್ಲಿ ನಾಲ್ಕು ಗ್ರಾಮದವರಿಂದ ಮಹಾಮಾರಿ ಸೇವೆ ನಡೆಯಲಿವೆ.

 

 

ಗೋಳಿಯಂಗಡಿ : ಹಿಲಿಯಾಣ ಶ್ರೀಬ್ರಹ್ಮಬೈದರ್ಕಳ ಗರೋಡಿಗೆ 400 ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಹಿಲಿಯಾಣ, ಆವರ್ಸೆ, ನಂಚಾರು, ಹೆಸ್ಕುಂದ, ಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಭಾಗಗಳಿಗೆ ಸಂಬಂಧ ಪಟ್ಟಿದೆ.
ಹಿನ್ನಲೆ: ಇಲ್ಲಿನ ಗರಡಿಮನೆಯಲ್ಲಿ ಕೋಟಿ-ಚೆನ್ನಯ್ಯ ಸುರ್ಜಿಯನ್ನು ತಳವೂರಿದ ಪುಣ್ಯಸ್ಥಳ,ಗರೋಡಿಯಲ್ಲಿ ಶ್ರೀಬ್ರಹ್ಮಬೈದರ್ಕಳ,
ಶಿವರಾಯ ಸೇರಿದಂತೆ ಸಪರಿವಾರ
ದೇವರುಗಳನ್ನು ಹಿಂದೆ ಪ್ರತಿಷ್ಠಾಪಿಸಲಾಯಿತು.
ಕಾಲಕ್ರಮೇಣ ಗರೋಡಿಯು ಅಜೀರ್ಣವಸ್ಥೆಯಿಂದ ನಾಶವಾಗಿದೆ.
ಸಣ್ಣ ಚಪ್ಪರದಲ್ಲಿ ಪೂಜಾ ಕೈಂಕರ್ಯಗಳು
ನಡೆಯುತ್ತಿತು. 1961 ರಿಂದ 1986 ತನಕ ನಿತ್ಯ ಪೂಜಾದಿಗಳು ನಡೆಯದೇ ಗರೋಡಿ ಸಂಪೂರ್ಣ ಪಾಳು ಬಿದ್ದಿದೆ. ಊರ ಭಕ್ತಾದಿಗಳು,ದಾನಿಗಳು ಸೇರಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. 2012 ಏ.17 ರಂದು ಗೋಳಿಯಂಗಡಿ ಉದ್ಯಮಿ ವೈ.ಕರುಣಾಕರ ಶೆಟ್ಟಿ
ಯರುಕೋಣೆ ನೇತ್ರತ್ವದಲ್ಲಿ ವೇ.ಮೂ. ಹಳ್ಳಿ ವೆಂಕಟೇಶ್ ಭಟ್ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳು
ಆರಂಭಗೊಂಡಿವೆ. ಕ್ಷೇತ್ರದ ಮಹಿಮೆಯಂತೆ ಊರ-
ಪರವೂರ ಭಕ್ತಾದಿಗಳು,ದಾನಿಗಳ ಸಹಕಾರದಲ್ಲಿ ಏಳು ತಿಂಗಳು ಹದಿನೇಳು ದಿನಕ್ಕೆ ಗರೋಡಿ ಜೀರ್ಣೋದ್ಧಾರಗೊಂಡು
ಪುನರ್ ಪ್ರತಿಷ್ಠಾಪನೆಗೊಂಡಿದೆ.
ಗರೋಡಿಯ ಮುಂಭಾಗದಲ್ಲಿ ಶಾಶ್ವತ ತಗಡು ಚಪ್ಪರ,ಸ್ವಾಗತ ಗೋಪುರ,ಅವರಣಗೋಡೆ, ಬ್ರಹ್ಮಾನಂದ
ರಂಗವೇದಿಕೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು,.ಪ್ರತಿ ಸಂಕ್ರಮಣದಂದು ಭಕ್ತಾದಿಗಳ
ಸಹಕಾರದಲ್ಲಿ ಅನ್ನಸಂತರ್ಪಣೆ ಸೇವೆ ನಡೆದು,ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿದಂತೆ ಭಕ್ತಾದಿಗಳ ಸಂಖ್ಯೆ ಏರಿಕೆ ಕಂಡಿದೆ.
ಗರೋಡಿ ಅಧ್ಯಕ್ಷ ವೈ ಕರುಣಾಕರ ಶೆಟ್ಟಿ ಯರುಕೋಣೆ ಸೇರಿದಂತೆ ಇನ್ನಿತರರನ್ನೊಳಗೊಂಡ ಸಮಿತಿ,ಗರೋಡಿ
ಅರ್ಚಕ ವೃಂದ,ಕೋಟಿ ಚೆನ್ನಯ್ಯ ಯುವಕ
ಮಂಡಲ,ವಿವಿಧ ಸಂಘ_ಸAಸ್ಥೆಗಳು ಗರೋಡಿಯ ಸರ್ವ
ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿವೆ.
ಸಮಸ್ತರ ಸಹಕಾರದಿಂದ ಹಿಲಿಯಾಣ ಗರೋಡಿ ಮಾದರಿ
ಗರೋಡಿಯಾಗಿ ಪ್ರಶಂಸೆಗೆ ಪಾತ್ರವಾಗಿದೆ.