ಗೋಳಿಯಂಗಡಿ : ಹಿಲಿಯಾಣ ಗರೋಡಿಯು ಬಹು ಕಾರಣಿಕ ಶಕ್ತಿಯಿಂದ ಭಕ್ತಾದಿಗಳ ಇಷ್ಟಾರ್ಥಗಳನ್ನು ಪ್ರಾಪ್ತಿಸುವ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಭಕ್ತಾದಿಗಳು, ದಾನಿಗಳ ಸಹಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ಗರೋಡಿಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯಾಗುತ್ತಿದೆ ಎಂದು ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಯರುಕೋಣೆ ಹೇಳಿದರು.

ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ
ನೇಮೋತ್ಸವದ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡ
ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗರೋಡಿಗೆ 4೦೦ ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ,
ಜೀರ್ಣೋದ್ಧಾರದ ಬಳಿಕ ಶಾಶ್ವತ ತಗಡು ಚಪ್ಪರ, ಸ್ವಾಗತ
ಗೋಪುರ,ಅವರಣಗೋಡೆ, ಬ್ರಹ್ಮಾನಂದ ರಂಗವೇದಿಕೆ, ಕೋಟಿ-ಚೆನ್ನಯ್ಯ ಭೋಜನ ಶಾಲೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರತಿ
ಸಂಕ್ರಮಣದಂದು ಅನ್ನಸಂತರ್ಪಣೆ ಸೇವೆ ಭಕ್ತಾದಿಗಳ ಸಹಕಾರದಲ್ಲಿ ನಡೆಯುತ್ತಿದೆ. ಅನ್ನದಾನ ಮಾಡಲಿಚ್ಚಿಸುವ
ಭಕ್ತಾದಿಗಳು ಹೆಸರು ನೋಂದಾಯಿಸಿಕೊಳ್ಳಬಹುದು
ಎಂದರು.

ಮುಕ್ಕಾಲಿ ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ,ಕೋಶಾಧಿಕಾರಿ
ಸಂತೋಷಕುಮಾರ್ ಶೆಟ್ಟಿ, ಗರೋಡಿ ಅರ್ಚಕ ವೃಂದವರು, ಊರ ಪರವೂರ ಭಕ್ತಾದಿಗಳು
ಉಪಸ್ಥಿತರಿದ್ದರು.
ನೇಮೋತ್ಸವದ ಪ್ರಯುಕ್ತ ಅಗಲುಸೇವೆ, ಮಹಾಪೂಜೆ,
ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ,ಸಂಜೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ,ರಾತ್ರಿ ಮಹಾ ಅನ್ನಸಂತರ್ಪಣೆ, ಶಿವರಾಯನ ಗೆಂಡಸೇವೆ,ಪರಿವಾರ ದೈವಗಳ ಕೋಲ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಗಣೇಶ ಅರಸಮ್ಮಕಾನು ಸ್ವಾಗತಿಸಿ ನಿರೂಪಿಸಿದರು.