ಬೆಳಗಾವಿ: ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಿದ ಚಿಕ್ಕೋಡಿಯ ಸರ್ಕಾರಿ ಶಾಲೆಯ ಶಿಕ್ಷಕನನ್ನು ಚಿಕ್ಕೋಡಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಶಿಕ್ಷಕ ಮೊಹಮ್ಮದ್ ಸಾದಿಕ್ ಮಿಯಾ ಬೇಗ್ ಬಂಧಿತ ಆರೋಪಿ. ಈಗ ಈತನ ಒಂದೊಂದೇ ಕೃತ್ಯ ಬೆಳಕಿಗೆ ಬರತೊಡಗಿದೆ. ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರೆಯುತ್ತಿದ್ದ. ಶೌಚಕ್ಕೆ ಹೋಗುತ್ತಿದ್ದಾಗ ಖಾಸಗಿ ಅಂಗಾಂಗದ ಫೋಟೋ ತೆಗೆದುಕೊಂಡು ಬರುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷಕ ಮೊಹಮ್ಮದ್ ಸಾದಿಕ್ ಹೇಳುತ್ತಿದ್ದನು. ಈ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದ.
ಶಿಕ್ಷಕ ಮೊಹಮ್ಮದ್ ಸಾದಿಕ್ ಒಂದು ವರ್ಷದಿಂದ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ತಾಯಿಯ ಮುಂದೆ ದೌರ್ಜನ್ಯದ ಬಗ್ಗೆ ಹೇಳಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಶಿಕ್ಷಕ ಮೊಹಮ್ಮದ್ ಸಾದಿಕ್ ಮೊಬೈಲ್‌ನಲ್ಲಿ 300ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಳ ಫೋಟೋಗಳು ಕೂಡ ಪತ್ತೆಯಾಗಿವೆ. ಶಿಕ್ಷಕ ಮೊಹಮ್ಮದ್ ಸಾದಿಕ್ ಮೊಬೈಲ್‌ನಲ್ಲಿ 100ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿವೆ.
ಶಿಕ್ಷಕ ಮೊಹಮ್ಮದ್ ಸಾದಿಕ್ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವನಾಗಿದ್ದು,ಐದು ವರ್ಷದಿಂದ ಚಿಕ್ಕೋಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆರೋಪಿಯ ಮೊಬೈಲ್ ಕೂಡ ಸೀಜ್ ಮಾಡಿದ್ದೇವೆ. ಮೊಬೈಲ್‌ನಲ್ಲಿನ ಕೆಲ ಫೋಟೊಗಳು ಡಿಲಿಟ್ ಆಗಿದ್ದು ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಪೋಕ್ಸೋದಡಿ ಕ್ರಮ ಜರುಗಿಸಲು ಈಗ ಪೊಲೀಸರು ಮುಂದಾಗಿದ್ದಾರೆ.