ಧಾರವಾಡ: ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿಕೆಯನ್ನು ಖಂಡಿಸಿ ದಲಿತ ಸಂಘಟನೆಗಳು ಜ. 9ರಂದು ಹುಬ್ಬಳ್ಳಿ- ಧಾರವಾಡ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ- ಧಾರವಾಡ ನಗರ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಎಸ್.ಎಸ್. ಕೆಳದಿಮಠ ಆದೇಶಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ನೀಡಲಾಗಿದೆ. ರಜಾ ದಿನವನ್ನು ಸರಿದೂಗಿಸಲು ಮುಂದಿನ 2 ಶನಿವಾರಗಳಂದು ಪೂರ್ಣಾವಧಿ ಶಾಲೆಯನ್ನು ನಡೆಸಬೇಕು ಎಂದು ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.