ಬೆಳಗಾವಿ : ಬೆಳಗಾವಿ ನಗರದಲ್ಲಿ ಇಂದು ಯುವಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಸ್ಕ್ರೂ ಡ್ರೈವರ್ ನಿಂದ ಯುವಕನನ್ನು ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ಗಾಂಧಿನಗರದ ಯುವತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಾಗ ಯುವತಿ ಸಹೋದರ ಗಮನಿಸಿ ಯುವಕನ ಕೊಲೆ ಮಾಡಿದ್ದಾನೆ. ಮುಜಾಮಿಲ್ ಸತಿಗೇರಿ ಎಂಬುವನು ಈ ಕೃತ್ಯ ನಡೆಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.