ಹೆಬ್ರಿ : ಇಲ್ಲಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರು ತರಗತಿ ವೇಳೆ ವಿದ್ಯಾರ್ಥಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಮಾರ್ಗದರ್ಶನ ನೀಡಲಾಯಿತು .
ತರಬೇತುದಾರ ಗಿರೀಶ್ ಎಂ. ಎನ್ . ಅವರು ಉಪನ್ಯಾಸ ನಡೆಸಿಕೊಟ್ಟು ಮಾತನಾಡಿ , ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಹೊಗಳುವಾಗ ಎಲ್ಲರ ಮುಂದೆ ಹೊಗಳಿ, ಬುದ್ಧಿ ಹೇಳುವಾಗ ವೈಯಕ್ತಿಕವಾಗಿ ಹೇಳಬೇಕು. ಮಗು ಹಂತ ಹಂತವಾಗಿ ಬದಲಾಗುತ್ತದೆಯೇ ಹೊರತು ತತ್ ಕ್ಷಣಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಅದನ್ನು ಅರಿತುಕೊಳ್ಳಬೇಕು ಎಂದರು . ಪ್ರಾಂಶುಪಾಲ ಅಮರೇಶ್ ಹೆಗ್ಡೆ , ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.