ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಚಗಾಂವದಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಂಡರು.

ಯುಗಾದಿ ಹಬ್ಬದ ಅಂಗವಾಗಿ ಗ್ರಾಮದ ವಿಘ್ನ ವಿನಾಶಕ ಗಣಪತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಮೆರವಣಿಗೆ ಮೂಲಕ ಗ್ರಾಮದ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಶ್ರೀ ಮಳೆಕರ್ಣಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಚಗಾಂವ ಗ್ರಾಮಸ್ಥರು ನನಗೆ ಹೆಚ್ಚಿನ ಮತ ನೀಡಿದ್ದರು. ನನಗೆ ಆಶೀರ್ವಾದ ಮಾಡಿದಂತೆ ನನ್ನ ಮಗನಿಗೂ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಬೆಳಗಾವಿ ಮಣ್ಣಿನ ಮಗನಿಗೆ ಹೆಚ್ಚಿನ ಮತ ನೀಡಬೇಕು. ಈ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದರು.

ಗ್ರಾಮದ ಮುಖಂಡರಾದ ಯುವರಾಜ್ ಕದಂ, ಬಾಲಕೃಷ್ಣ ತೆರಸೆ, ಬಾಳಸಾಹೇಬ್ ದೇಸಾಯಿ, ನೀಲಕಂಠ ರಾಜ್ ಗೋಳ್ಕರ್, ಇಮಾಮ್ ತಹಸೀಲ್ದಾರ್, ಜಾವೆದ್ ಜಮಾದಾರ್, ಯಾದಬ್ ಕಾಂಬ್ಲಿ, ರಾಮ ಕದಂ
ಮನೋಹರ್ ಕದಂ, ಪ್ರಫುಲ್ ಚೌಗಲೆ, ಶಶಿಕಾಂತ್ ಜಾಧವ್ ಉಚಗಾಂವ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಥುರ ತೆರ್ಸೆ, ಯೋಗೀತಾ ದೇಸಾಯಿ, ಭಾರತಿ ಜಾಧವ್, ರೂಪಾ ಗೊಂದಳಿ ಸೇರಿದಂತೆ ಉಪಸ್ಥಿತರಿದ್ದರು.