ಬೆಳಗಾವಿ :
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಗೋಕಾಕ್ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಬಿರು ಬಿಸಿಲು ಲೆಕ್ಕಿಸದೆ ಸಾವಿರಾರು ಜನರು ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿ, ಬಿಜೆಪಿ ಅಭ್ಯರ್ಥಿಗೆ ಜಗದೀಶ್ ಶೆಟ್ಟರ್ ಗೆ ಬೆಂಬಲ ಸೂಚಿಸಿದರು.‌

ಗೋಕಾಕ ಮತ ಕ್ಷೇತ್ರದ ನಭಾಪೂರದಲ್ಲಿ ಖನಗಾಂವ, ಮಿಡಕನಕಟ್ಟಿ, ಶಿಲ್ತಿಭಾಂವಿ, ಮಕ್ಕಳಗೇರಿ, ಕೊಳವಿ, ಬೆಣಚಿನವರ್ಡಿ, ಮೂಲದಿನ್ನಿ, ಮಮದಾಪೂರ, ಹಿರೇನಂದಿ ಗ್ರಾಮಗಳ ಪ್ರಚಾರಾರ್ಥ ಸಮಾರಂಭದಲ್ಲಿ ಭಾಗವಹಿಸಿ, ಮತಯಾಚನೆ ಮಾಡಲಾಯಿತು.

ಇದಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಶಾಸಕ ರಮೇಶ ಜಾರಕಿಹೊಳಿ ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆ ಉದ್ದಕ್ಕೂ ಮೋದಿ ಮೋದಿ ಘೋಷಣೆ ಜನರು ಕೂಗಿದರು. ಬಂದಿದ ಜನ ಜಗದೀಶ್ ಶೆಟ್ಟರ್ ಪರ ಜೈಕಾರ ಹಾಕಿದರು.‌ ರಸ್ತೆ ಉದಕ್ಕೂ ಪುಷ್ಪ ವೃಷ್ಟಿ ಮಾಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.‌

ಬಳಿಕ ವೇದಿಕೆ ಮೇಲೆ ಭಾಷಣ ಮಾಡಿದ ಜಗದೀಶ ಶೆಟ್ಟರ್ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ.‌ ನರೇಂದ್ರ ಮೋದಿಯವರು ಈ ದೇಶದ ಆಸ್ತಿ. ನರೇಂದ್ರ ಮೋದಿಯವರ ತಮ್ಮ ಆಡಳಿತ 10 ವರ್ಷದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ.‌ ಯಾವುದೇ ಭ್ರಷ್ಟಾಚಾರ ಇಲ್ಲದೆ ಪಾರದರ್ಶಕವಾದ ಸರ್ಕಾರ ನಡೆಸಿದ್ದಾರೆ. ಒಂದೇ ಒಂದು ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಿದ್ದಾರೆ.‌ ವಿರೋಧ ಪಕ್ಷಗಳು ಹೊರಗೆ ಅಷ್ಟೇ ಮೋದಿಯವರು ಟೀಕೆ ಮಾಡುತ್ತಾರೆ. ಆದರೆ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಟೀಕೆ ಮಾಡಿಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಬಹಳ ದಿನ ಇರುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌

ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಮಾಜಿ ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಮಾಜಿ ಶಾಸಕರಾದ ಎಂ.ಎಲ್. ಮುತ್ತೇಣ್ಣವರ, ಪ್ರಮುಖರಾದ ರಾಜೇಂದ್ರ ಗೌಡಪ್ಪಗೋಳ, ರಾಜು ಮುನವಳ್ಳಿ ಹಾಗೂ ಗುರುಹಿರಿಯರು, ಮಾತೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.