ಕೊಪ್ಪಳ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ಜಿಲ್ಲೆಯ ಹುಲಿಗಿಗ್ರಾಮದ ಹುಲಿಗೆಮ್ಮ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 30ರಿಂದ ಜೂನ್ 3ರವರೆಗೆ ನಡೆಯಲಿದ್ದು, ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಜಾತ್ರೆಯ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೇ 30ರಂದು ಉತ್ಸವ, ಮೇ 31ರಂದು ಅಕ್ಕಿಪಡಿ, ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಜೂ. 1ರಂದು ಬಾಳಿದಂಡಿಗೆ, ಕೊಂಡದ ಪೂಜೆ, ಗಂಗಾದೇವಿ ಪೂಜಾ, ಶ್ರೀದೇವಿಗೆ ಪ್ರಸಾದ ಕೇಳುವುದು, ಬಾಳಿದಂಡಿಗೆ ಆರೋಹಣ ನಡೆಯಲಿದೆ.